
ಕಾರವಾರ:
ಭಾರತೀಯ ನೌಕಾಪಡೆಯ ಆಫ್ಶೋರ್ ಪ್ಯಾಟ್ರೋಲ್ ವೆಸೆಲ್ (ಒಪಿವಿ) ಐಎನ್ಎಸ್ ಸುನಯನಾ ಶನಿವಾರ ಕಾರವಾರದಿಂದ ಐಒಎಸ್ ಸಾಗರ (ಭದ್ರತೆ ಮತ್ತು ಪ್ರಾದೇಶಿಕ ಅಭಿವೃದ್ಧಿಗಾಗಿ) ಮಿಷನ್ಗೆ ಹೊರಡಲಿದ್ದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಹಸಿರು ನಿಶಾನೆ ತೋರಿಸಿದರು.
ಇಲ್ಲಿನ ಕದಂಬ ನೌಕಾನೆಕೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆನೀಡಲಾಯಿತು. ನೌಕೆಯಲ್ಲಿ ಒಂಬತ್ತು ಸ್ನೇಹಪೂರ್ಣ ವಿದೇಶಿ ರಾಷ್ಟ್ರಗಳಿಂದ (ಎಫ್ಎಫ್ಎನ್ಗಳು) 44 ನೌಕಾಪಡೆಯ ಸಿಬ್ಬಂದಿಗಳಿದ್ದಾರೆ. ಈ ಮಿಷನ್ ಪ್ರಾದೇಶಿಕ ಸಮುದ್ರ ಭದ್ರತೆ ಮತ್ತು ಅಂತರರಾಷ್ಟ್ರೀಯ ಸಹಕಾರದಲ್ಲಿ ಭಾರತ ತಾಳ್ಮೆಯಿಂದ ಮುಂದಿರಲು ಒಂದು ಮಹತ್ವಪೂರ್ಣ ಹೆಜ್ಜೆಯಾಗಿದೆ ಎಂದು ನೌಕಾನೆಲೆಯು ತಿಳಿಸಿದೆ.
ಐಒಎಸ್ ಸಾಗರ್ ಮಿಷನ್ ದಕ್ಷಿಣ-ಪಶ್ಚಿಮ ಹಿಂದೂ ಮಹಾಸಾಗರದ ನೌಕಾಪಡೆಗಳು ಹಾಗೂ ಸಮುದ್ರ ಸಂಸ್ಥೆಗಳನ್ನು ಭಾರತೀಯ ನೌಕಾಪಡೆಯ ವೇದಿಕೆಯ ಮೇಲೆ ಒಟ್ಟುಗೂಡಿಸಲು ಯತ್ನಿಸುತ್ತಿರುವ ಉಪಕ್ರಮವಾಗಿದೆ.
ಐಎನ್ಎಸ್ ಸುನಯನಾ ತನ್ನ ನಿಯೋಜನೆಯ ವೇಳೆಯಲ್ಲಿ ದಾರ್-ಎಸ್-ಸಲಾಂ, ನಕಾಲಾ, ಪೋರ್ಟ್ ಲೂಯಿಸ್ ಮತ್ತು ಪೋರ್ಟ್ ವಿಕ್ಟೋರಿಯಾ ಬಂದರುಗಳನ್ನು ಭೇಟಿ ಮಾಡಲಿದೆ. ಈ ಅಂತರರಾಷ್ಟ್ರೀಯ ಸಿಬ್ಬಂದಿ ತಂಡ ಕೊಚ್ಚಿಯಲ್ಲಿ ಪಡೆದಿರುವ ವಿವಿಧ ವೃತ್ತಿಪರ ತರಬೇತಿ ಶಾಲೆಗಳ ಪಾಠಗಳನ್ನು ಉಪಯೋಗಿಸಿ ತರಬೇತಿ ಅಭ್ಯಾಸಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.