ದಾಂಡೇಲಿ: ತೆಲಂಗಾಣದ ತ್ರಿವರ್ಣ ಪ್ರತಿಷ್ಠಾನದ ವತಿಯಿಂದ ವಾರ್ಷಿಕವಾಗಿ ಕೊಡಮಾಡುವ ‘ಕನ್ನಡ ಬಂಧು’ ಪ್ರಶಸ್ತಿಗೆ ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಪತ್ರಕರ್ತ ಬಿ.ಎನ್. ವಾಸರೆ ಆಯ್ಕೆಯಾಗಿದ್ದಾರೆ.
ಬಿ.ಎನ್. ವಾಸರೆಯವರ ಜೊತೆ ನಾಡಿನ ಹಲವು ನಾಡು-ನುಡಿಯ ಸಂಘಟಕರು ಹಾಗೂ ಸಾಧಕರನ್ನ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಹಾವೇರಿಯ ಸಾಹಿತ್ಯ ಭವನದಲ್ಲಿ ನವೆಂಬರ 15 ರಂದು ನಡೆಯಲಿರುವ ರಾಷ್ಡ್ರೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತ್ರಿವರ್ಣ ಕರ್ನಾಟಕದ ಅಧ್ಯಕ್ಷ, ಸಮ್ಮೇಳನ ಸಂಘಟಕ ಪೊಟ್ಲೂರಿ ಹರಿಕೃಷ್ಣ ತಿಳಿಸಿದ್ದಾರೆ.
ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಬಿ. ಎನ್. ವಾಸರೆಯವರು ಹಲವು ವರ್ಷಗಳಿಂದ ಪತ್ರಕರ್ತರಾಗಿ ಕಾರ್ಯನಿರ್ವಹಿದುತ್ತಿದ್ದು, ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದಾರೆ. ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ವಾಸರೆಯವರು ಸಾಹಿತ್ಯ ಪರಿಷತ್ತನ್ನ ಪರಿಣಾಮಕಾರಿಯಾಗಿ, ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಅವರಿಗೆ ‘ಕನ್ನಡ ಬಂಧು’ ಗೌರವ ಪ್ರಾಪ್ತವಾಗಿದ್ದು, ಇವರನ್ನ ಹಲವರು ಅಭಿನಂದಿಸಿದ್ದಾರೆ.
