
ಶಿರಸಿ:
ವೃದ್ದೆಯ ಮಾಂಗಲ್ಯಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ದರೋಡೆ ಕೋರರನ್ನು ಬನವಾಸಿಯ ಪೊಲೀಸರು ಬಂಧಿಸಿದ್ದಾರೆ.
ಅರ್ಜುನ ಶ್ರೀರಾಮ ಶಿಂದೆ ಹಾಗೂ ಶಿವಮೊಗ್ಗ ಗಾಡಿಕೊಪ್ಪದ ಚೇತನ ಪರಶುರಾಮ ಗಾಯಕವಾಡ ಬಂಧಿತ ಆರೋಪಿಗಳು.
ಇವರಿಂದ ಕಳ್ಳತನಕ್ಕೆ ಬಳಸಿದ ಕಾರು ಕಳ್ಳತನಮಾಡಿದ್ದ 22 ಗ್ರಾಂ ಮಾಂಗಲ್ಯ ಸರ ವಶಕ್ಕೆ ಪಡೆಯಲಾಗಿದೆ.
ಪಿಎಸ್ಆಯ್ ಗಳಾದ ಚಂದ್ರಕಲಾ ಪತ್ತಾರ್, ಸುನಿಲಕುಮಾರ ಬಿ ವೈ, ಸಿಬ್ಬಂದಿಗಳಾದ ಚಂದ್ರಪ್ಪ ಕೊರವರ್, ಪ್ರಶಾಂತ, ಬಸವರಾಜ ಜಾಡರ್, ಮಂಜುನಾಥ ನಡುವಿನಮನಿ, ಮಂಜಪ್ಪ ಪಿ ಹಾಗು ಉದಯ ಗುನಗಾ ಪಾಲ್ಗೊಂಡಿದ್ದರು.