
ದಾಂಡೇಲಿ:
ನಗರದ ಗಾಂಧಿನಗರದಲ್ಲಿ ಮನೆಯೊಂದರಲ್ಲಿ ಕೆಲವು ದಿನಗಳ ಹಿಂದೆ 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ಸಿಕ್ಕಿಬಿದ್ದಿದ್ದು ಆರೋಪಿಯನ್ನು ಪತ್ತೆ ಹಚ್ಚಿ ಯಾವ ಕಾರಣಕ್ಕೆ ಈ ನೋಟುಗಳನ್ನು ಮನೆಯಲ್ಲಿಡಲಾಗಿದ್ದು ಹಾಗೂ ಇದರ ಬಗ್ಗೆ ತನಿಖೆ ನಡೆಸಬೇಕೆಂದು ಡಿವೈಎಸ್ಪಿ ಶಿವಾನಂದ್ ಮದರ್ಖಂಡಿ ಅವರಿಗೆ ಇಂದು ಬೆಳಿಗ್ಗೆ ಮಾಜಿ ಶಾಸಕ ಸುನಿಲ್ ಹೆಗಡೆ ಅವರ ಉಪಸ್ಥಿತಿಯಲ್ಲಿ ದಾಂಡೇಲಿ ಭಾಜಪ ಮಂಡಲದವರು ಮನವಿ ನೀಡಿದರು. ಮನವಿ ನೀಡಿ ಮಾತನಾಡಿದ ಮಾಜಿ ಶಾಸಕ ಸುನಿಲ್ ಹೆಗಡೆಯವರು ಅಂದಾಜು 14 ಕೋಟಿಯಷ್ಟು ನಕಲಿ ನೋಟುಗಳು ಪತ್ತೆಯಾಗಿದ್ದು
ಆರೋಪಿಯು ನಾಪತ್ತೆಯಾಗಿದ್ದು ಆರೋಪಿಯನ್ನು ಪತ್ತೆ ಮಾಡಿ ಪ್ರಕರಣವನ್ನು ದಾಖಕಲಿಸಿ ತನಿಖೆ ನಡೆಸಬೇಕೆಂದು ಹೇಳಿದರು. ದಾಂಡೇಲಿಯು ಅಭಿವೃದ್ಧಿ ದೃಷ್ಟಿಯಿಂದ ಪ್ರಖ್ಯಾತಿ ಆಗಬೇಕು ಹೊರತು ಕುಖ್ಯಾತಿ ಆಗಬಾರದು. ದಾಂಡೇಲಿಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಹಲವಾರು ಉದ್ಯಮಿಗಳು ಜಮೀನು ಹಾಗೂ ರಿಸೊರ್ಟಗಳ ಖರೀದಿಗಾಗಿ ಅಕ್ರಮವಾಗಿ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡುತಿದ್ದು ಅದರಿಂದ ಸರ್ಕಾರಕ್ಕಾಗಲಿ ಹಾಗೂ ಇಲ್ಲಿಯ ಸ್ಥಳೀಯರಿಗೆ ಆಗಲಿ ಉಪಯೋಗವಾಗುತ್ತಿಲ್ಲ. ಹಳಿಯಾಳ ಹಾಗೂ ದಾಂಡೇಲಿಯಲ್ಲಿ ಯುವಕರು ಹೆಚ್ಚಾಗಿ 20 ವಯಸ್ಸಿನ ಹುಡುಗರು ಗಾಂಜಾ ಚಟಕ್ಕೆ ಬಲಿಯಾಗುತ್ತಿದ್ದಾರೆ.ಹಾಗಾಗಿ ಪೊಲೀಸರು ಗಾಂಜಾ ತಡೆಯುವುದಕ್ಕೆ ವಿಶೇಷ ತಂಡವನ್ನು ರಚಿಸಿ ಗಾಂಜಾ ಮಾರುವವರನ್ನು ಹಿಡಿದು ಗಾಂಜಾ ಮುಕ್ತ ನಗರ ಮಾಡಬೇಕೆಂದರು.