
ಕಾರವಾರ:
ಕಾರೊಂದರ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ನಡು ರಸ್ತೆಯಲ್ಲೆ ಕಾರು ಹೊತ್ತಿ ಉರಿದ ಘಟನೆ ಗುರುವಾರ ತಡರಾತ್ರಿ ಇಲ್ಲಿನ ಸದಾಶಿವಗಡದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.
ರಾತ್ರಿ 3 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಕಾರವಾರ ಮೂಲದ ಇಬ್ಬರು ಕೆ.ಎ 30 ಎನ್ 9977 ನೊಂದಣಿಯ ಕಾರಿನಲ್ಲಿ ಗೋವಾದ ಕಡೆಗೆ ಸಂಚರಿಸುತ್ತಿದ್ದರು. ಈ ವೇಳೆ ಸದಾಶಿವಗಡದ ಬಳಿ ಬಾನೆಟ್ ನಿಂದ ಹೊಗೆ ಬರುವುದು ಕಾಣಿಸಿದೆ. ಬಳಿಕ ಚಾಲಕನು ಕಾರಿನಿಂದ ಇಳಿದು ಬಾನೆಟ್ ತೆರೆದಿದ್ದಾರೆ. ಬ್ಯಾಟರಿಯಲ್ಲಿ ಶಾರ್ಟ್ ಆದ ಕಾರಣ ಕೆಲವೇ ಕ್ಷಣಗಳಲ್ಲಿ ಕಾರಿಗೆ ಬೆಂಕಿ ಹೊತ್ತಿದೆ.
ಬೆಳಗಿನಜಾವ 3.30 ಕ್ಕೆ ಅಗ್ನಿಶಾಮಕ ಠಾಣೆಗೆ ಕರೆ ಬಂದಿದ್ದು ಅಗ್ನಿಶಾಮಕದಳದ ಸಿಬ್ಬಂದಿಯು ಕಾರ್ಯಾಚರಣೆ ನಡೆಸಿ ಬೆಂಕಿ ನಂಧಿಸಿದ್ದಾರೆ. ಘಟನೆಯಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.