
ಕಾರವಾರ:
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಸಾಯಿಕಟ್ಟಾ ಪ್ರದೇಶದಲ್ಲಿರುವ ಸಾಯಿ ಮಂದಿರದಲ್ಲಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಸೋಮವಾರ ತಡರಾತ್ರಿ ಕಳ್ಳರು ದೇವಾಲಯದಲ್ಲಿದ್ದ ಬೆಳ್ಳಿ ಕಿರೀಟ, ಪಾದುಕೆ ಸೇರಿದಂತೆ ವಿವಿಧ ಆಭರಣಗಳನ್ನು ಕದ್ದೊಯ್ಯಿದ್ದಾರೆ. ಕಳ್ಳತನದ ಮೌಲ್ಯವನ್ನು ಸುಮಾರು ಐದು ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.
ಕಳ್ಳತನ ಕೃತ್ಯವನ್ನು ಕೈಗೊಂಡಿದ್ದ ವೇಳೆ ಕಳ್ಳರು ದೇವಾಲಯದಲ್ಲಿನ ಸಿಸಿಟಿವಿಗೆ ಸಿಕ್ಕಿ ಬಿದ್ದಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಕಾರವಾರ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.