
ಶಿರಸಿ:
ಶಿರಸಿ ತಾಲೂಕಿನ ಕಾಗೇರಿ ಗ್ರಾಮದ ಬೆಟ್ಟದಲ್ಲಿ ಕೊಳೆತ ಸ್ಥಿತಿಯಲ್ಲಿ ಚಿರತೆಯ ಶವ ಪತ್ತೆಯಾಗಿದೆ.
ವಿದ್ಯುತ್ ಸ್ಪರ್ಷಕ್ಕೊಳಗಾಗಿ ಮೃತಪಟ್ಟ ನಾಲ್ಕು ವರ್ಷದ ಗಂಡು ಚಿರತೆಯ ಶವ ಕೊಳತೆ ಸ್ಥಿತಿಯಲ್ಲಿ ಅರಣ್ಯ ಅಧಿಕಾ೪ಇಗಳಿಗೆ ಕಾಣಿಸಿಕೊಂಡಿದೆ. ಪಶು ವೈದ್ಯಾದಿಕಾರಿ ಡಾ.ಪ್ರಶಾಂತ ಇವರಿಂದ ಶವ ಪರೀಕ್ಷೆ ನಡೆಸಿ ನ್ಯಾಯಾಲಯದ ಅನುಮತಿಯೊಂದಿಗೆ ವಿಲೇವಾರಿಮಾಡಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.