
ಕಾರವಾರ:
ಮಾಜಿ ಸದಸ್ಯನ ಹತ್ಯೆ ಮಾಡಿ ಪರಾರಿಯಾಗಿದನೆನ್ನಲಾದ ಆರೋಪಿಯೋರ್ವನನ್ನ ಕಾರವಾರ ಪೊಲೀಸರು ಗೋವಾದಿಂದ ಬಂಧಿಸಿ ಕರೆತಂದಿದ್ದಾರೆ. ಅಲ್ಲದೇ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ.
ಕಾರವಾರದ ನಿತೇಶ್ ತಾಂಡೇಲ ಎಂಬಾತನನ್ನ ಬಂಧಿಸಿದ್ದಾರೆ. ಭಾನುವಾರ ಬೆಳಿಗ್ಗೆ ನಗರದ ಬಿಎಸ್ ಎನ್ ಎಲ್ ಕಚೇರಿ ಎದುರಿನ ರಸ್ತೆಯಲ್ಲಿ ನಗರಸಭೆಯ ಮಾಜಿ ಸದಸ್ಯ ರೌಡಿ ಶೀಟರ್ ಸತೀಶ್ ಕೋಳಂಬಕರ್ ಗೆ ಚಾಕು ಇರಿದು ಬರ್ಭರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ. ಬಳಿಕ ನಿತೇಶ್ ಕೋಣೆ ಸಮೀಪದ ಮನೆಯೊಂದರಲ್ಲಿ ಬೈಕ್ ಇಟ್ಟು ಗೋವಾ ಕಡೆ ಎಸ್ಕೆಪ್ ಆದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದರು.
ಆರೋಪಿತ ನಿತೇಶ್ ತಾಂಡೇಲ ಗೋವಾದ ಕಡಲತೀರದ ಹೋಟೆಲ್ ಸಮೀಪ ಹಿಡಿದು ಕರೆತಂದಿದ್ದಾರೆ. ಸತೀಶ್ ಕೋಳಂಕರ್ ಮಾಲಿಕತ್ವದ ಅಂಗಡಿಯನ್ನ ಇದೆ ನಿತೇಶ್ ತಾಂಡೇಲ ಬಾಡಿಗೆಗೆ ಪಡೆದಿದ್ದ ಎನ್ನಲಾಗಿದ್ದು, ವ್ಯವಹಾರ ಸರಿಯಾಗಿ ಆಗದೇ ಇರುವುದರಿಂದ ಅಂಗಡಿಯನ್ನ ವಾಪಾಸ್ ಸತೀಶ ಕೋಳಂಬಕರ್ ಗೆ ನೀಡಿದ್ದ. ನಿತೇಶ್ ಕೊಟ್ಟಿದ್ದ ಮುಂಗಡ ಹಣವನ್ನ ಸತೀಶ್ ವಾಪಸ್ ಕೊಟ್ಟಿರಲಿಲ್ಲ ಎನ್ನಲಾಗಿದೆ. ಇದೆ ಕಾರಣಕ್ಕೆ ಕಳೆದ ಐದಾರು ತಿಂಗಳಿನಿಂದ ಇಬ್ಬರ ನಡುವೆ ಗಲಾಟೆ ನಡೆಯುತ್ತಲೇ ಇತ್ತು ಎನ್ನಲಾಗಿದೆ. ಈ ವಿಚಾರವಾಗಿ ರವಿವಾರ ನಗರದ ನಡು ರಸ್ತೆಯಲ್ಲಿ ಇಬ್ಬರ ನಡುವೆ ಗಲಾಟೆ ಉಂಟಾಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಮಂಗಳವಾರ ಬೆಳಗ್ಗೆ ಹತ್ಯೆ ನಡೆದ ಸ್ಥಳಕ್ಕೆ ಆರೋಪಿಯನ್ನು ಕರೆ ತಂದು ಪಂಚನಾಮೆ ನಡೆಸಿದ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.