
ಕಾರವಾರ:
ಜಿಲ್ಲೆಯಲ್ಲಿ ಪಾಕಿಸ್ತಾನ ಮೂಲದ ಒಟ್ಟೂ 15 ಮಹಿಳೆಯರಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ತಿಳಿಸಿದರು.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಯಾಬಿನೇಟ್ ಸಭೆಯಲ್ಲಿ ಪಾಕಿಸ್ತಾನ ಮೂಲದ ಪ್ರಜೆಗಳಿಗೆ ಕೊಟ್ಟ ಎಲಾ ರೀತಿಯ ವೀಸಾ ರದ್ದು ಮಾಡಲಾಗಿದೆ. ಅದರಣತೆ ಏ. 27 ರೊಳಗೆ ಎಲ್ಲಾ ರೀತಿಯ ವೀಸಾ ಹಾಗೂ ಏ. 29 ರೊಳಗೆ ವೈದ್ಯಕೀಯ ವೀಸಾ ಪಡೆದವರು ವಾಪಸ್ ತೆರಳಬೇಕಿದೆ. ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಒಟ್ಟೂ 88 ಜನ ಪಾಕಿಸ್ತಾನಿಯರಿದ್ದು, 4 ಜನ ಮೆಡಿಕಲ್ ವಿಸಾ ಪಡೆದವರಿದ್ದಾರೆ. ಉತ್ತರ ಕನ್ನಡದಲ್ಲಿ ಮೂವರು ಮಕ್ಕಳು ಸೇರಿದಂತೆ 15 ಜನ ಪಾಕಿಸ್ತಾನಿ ಮಹಿಳೆಯರಿದ್ದಾರೆ. ಅವರ ಪೈಕಿ ಕಾರವಾರದ ಒರ್ವ ಮಹಿಳೆ ಜೈಲಿನಲ್ಲಿದ್ದಾಳೆ. ಹೊನ್ನಾವರದ ವಲ್ಕಿಯ ಮಹಿಳೆಯು ಪಾಕಿಸ್ತಾನಕ್ಕೆ ಮದುವೆಯಾಗಿ ಹೋಗಿದ್ದಾಳೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿರುವ ಪಾಕಿಸ್ತಾನ ಮೂಲದ ಮಹಿಳೆಯರು ಇಲ್ಲಿನವರನ್ನು ಮದುವೆಯಾದ ಕಾರಣ ಗಡಿ ಪಾರುಮಾಡುವ ಅಗತ್ಯವಿಲ್ಲ. ಆದರೂ ಸರಕಾರದ ಆದೇಶದಂತೆ ಕ್ರಮ ಕೈಗೊಳ್ಳುತ್ತೇವೆ.
ಜಿಲ್ಲೆಯಲ್ಲಿ ಇರುವ ಪಾಕಿಸ್ತಾನಿ ಮಹಿಳೆಯರು ಎಲ್ಲರೂ ನವಾಯತ್ ಮುಸ್ಲಿಂ ಆಗಿದ್ದು, ಯಾರೂ ಕೂಡ ಭಾರತೀಯ ಪೌರತ್ವ ಪಡೆದಿಲ್ಲ. ಅಲ್ಲದೇ ಬಾಂಗ್ಲಾ ನುಸುಳುಕೋರರ ಬಗ್ಗೆಯೂ ಸತತವಾಗಿ ತಪಾಸಣೆ ಮಾಡುತ್ತಿದ್ದೇವೆ ಎಂದರು.