
ದಾಂಡೇಲಿ : ನಾಯಿಯ ದೇಹದ ಭಾವಚಿತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರವನ್ನು ಹಾಕಲಾದ ಫೋಟೋವನ್ನು ಫೇಸ್ಬುಕ್’ನಲ್ಲಿ ಶೇರ್ ಮಾಡಿದ್ದ ವ್ಯಕ್ತಿಯೋರ್ವನನ್ನು ದಾಂಡೇಲಿ ಪೊಲೀಸರು ಬಂಧಿಸಿ ಜೈಲಿಗಟ್ಟಿರುವ ಶನಿವಾರ ಸಂಜೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.
ನಗರದ ಸಂಡೆ ಮಾರ್ಕೆಟ್ ಹತ್ತಿರ ಹಣ್ಣು ಹಂಪಲು ವ್ಯಾಪಾರ ಮಾಡುವ ಅನಿಸ್ ಹುಲ್ಗರ್ ಎಂಬಾತನೇ ಈ ರೀತಿಯ ಅಪಮಾನಕರವಾದ ಫೋಟೋವನ್ನು ಫೇಸ್ ಬುಕ್ ಮೂಲಕ ಶೇರ್ ಮಾಡಿ ಪೊಲೀಸರಿಂದ ಬಂಧನಕ್ಕೊಳಗಾದ ವ್ಯಕ್ತಿಯಾಗಿದ್ದಾನೆ.