
ದಾಂಡೇಲಿ:
ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಸಲುವಾಗಿ ನಗರದ ವೆಸ್ಟ್ ಕೊಸ್ಟ್ ಪೇಪರ ಮಿಲ್ ಹಾಗೂ ರೋಟರಿ ಕ್ಲಬ್ ವತಿಯಿಂದ ಸಾರ್ವಜನಿಕರಿಗೆ ಬಟ್ಟೆ ಕೈಚೀಲ ವಿತರಣಾ ಕಾರ್ಯಕ್ರಮ ನಗರದ ಬಸ್ ನಿಲ್ದಾಣ ಹಾಗೂ ಸಂಡೆ ಮಾರುಕಟ್ಟೆಯಲ್ಲಿ ಭಾನುವಾರ ನಡೆಯಿತು.
ಈ ಸಂದರ್ಭದಲ್ಲಿ ವೆಸ್ಟ್ ಕೊಸ್ಟ್ ಪೇಪರ ಮಿಲ್ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ, ರಾಘವೇಂದ್ರ ಆರ್.ಜೆ., ಖಲಿಲ್ ಕುಲಕರ್ಣೆ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ರಾಹುಲ್ ಬಾವಾಜಿ, ಕಾರ್ಯದರ್ಶಿ ಆಶಿತೋಷಕುಮಾರ ರಾಯ, ಖಜಾಂಚಿ ಲಿಯೋ ಪಿಂಟೋ, ಎಸ್.ಜಿ.ಬಿರಾದಾರ, ಡಾ.ದಫೇದಾರ, ಜೋಸೆಫ್ ಗೊನ್ಸಾಲ್ವಿಸ್ ಮುಂತಾದವರಿದ್ದರು.
ಎಚ್೨೭.೪-ಡಿಎನ್ಡಿ೧: ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯಿಂದ ಸಾರ್ವಜನಿಕರಿಗೆ ಬಟ್ಟ ಕೈಚೀಲ ವಿತರಣೆ.