
ದಾಂಡೇಲಿ:
ದಾಂಡೇಲಿ ಫುಟ್ಬಾಲ್ ಕ್ಲಬ್ ವತಿಯಿಂದ ನಡೆದ ದಾಂಡೇಲಿ ಫುಟ್ಬಾಲ್ ಟೂರ್ನಮೆಂಟ್ ಸೀಜನ್ 01 ರ ಪಂದ್ಯಾವಳಿ ಭಾನುವಾರ ಐ.ಪಿ.ಎಮ್ ಮೈದಾನದಲ್ಲಿ ನಡೆಯಿತು.
ಭಾನುವಾರ ನಡೆದ ಫೈನಲ್ ಪಂದ್ಯವನ್ನು ನಗರದ ಶಿಕ್ಷಕಿ ಉಜ್ವಲಾ ಸದಲಗಿ ಚಾಲನೆ ನೀಡಿದರು.
ಕಳೆದ ಎರಡು ದಿನಗಳಿಂದ ನಡೆದ ಫುಟ್ಬಾಲ್ ಪಂದ್ಯಾವಳಿ ಮೊದಲ ದಿನ 9 ತಂಡಗಳು ಕಣದಲ್ಲಿದ್ದು ಭಾನುವಾರ 15 ತಂಡಗಳು ನಡುವೆ ರೋಚಕ ಹಣಾಹಣಿ ನಡೆಯಿತು ಅಂತಿಮವಾಗಿ ಬೆಂಗಳೂರಿನ ರಾವ್ ಎಫ್. ಸಿ. ತಂಡ ದಾಂಡೇಲಿ ಫುಟ್ಬಾಲ್ ಕಪ್ ಮುಡಿಗೇರಿಸಿಕೊಂಡಿತು.
5 ಎ. ಸೈಡ್ 5+2 ರೀಡಿಂಗ್, 15 ನಿಮಿಷಗಳ ಸಮಯದ ಪಂದ್ಯ ಇದಾಗಿದೆ. ಹುಬ್ಬಳ್ಳಿ, ಬೆಂಗಳೂರು, ಬೆಳಗಾವಿ, ರಾಮನಗರ, ದಾಂಡೇಲಿ ಹಾಗೂ ಜಿಲ್ಲೆಯ ಇತರೆ ಭಾಗಗಳಿಂದ ತಂಡಗಳು ಭಾಗವಹಿಸಿದ್ದವು.
ಮೊದಲ ಬಹುಮಾನ 35.500 ರೂಪಾಯಿ ಹಾಗೂ ಶಾಶ್ವತ ಫಲಕವನ್ನು ದಾಂಡೇಲಿಯ ಫುಟ್ಬಾಲ್ ತಂಡ ತನ್ನದಾಗಿಸಿಕೊಂಡಿತು.
ಎರಡನೇ ಬಹುಮಾನ 20,000 ರೂಪಾಯಿ ಹಾಗೂ ಶಾಶ್ವತ ಫಲಕವನ್ನು ಬೆಂಗಳೂರಿನ ರಾವ್ ಎಫ್ .ಸಿ. ಫುಟ್ಬಾಲ್ ತಂಡ ಪಡೆದುಕೊಂಡಿದೆ.
ಬೆಸ್ಟ್ ಡಿಫೆಂಡರಾಗಿ ಸಮೀರ ಬೆಸ್ಟ್ ಪ್ಲೇಯರಾಗಿ ಮಾನಸ ಇವರುಗಳು ಶಾಶ್ವತ ಫಲಕ ಹಾಗೂ ನಗದು ಬಹುಮಾನ ಪಡೆದುಕೊಂಡರು.
ಪಂದ್ಯದ ಆಯೋಜಕರಾಗಿ ಮಾನಸ ತಲಪಾಟಿ, ರಿಚರ್ಡ್ ಫೆರ್ನಾಂಡಿಸ್, ಅಮೂಸ್ .ಆರ್ ಎಮ್., ಇತರರು ಪಂದ್ಯ ಯಶಸ್ಸಿಗೆ ಸಹಕರಿಸಿದರು.