
ಕಾರವಾರ:
ಕರಾವಳಿ ಉತ್ಸವ ನಡೆಸುವ ಸಂಬಂಧ ಕೆಲವರು ತಪ್ಪು ಹುಡುಕಲು ಪ್ರಯತ್ನಿಸುತ್ತಿದ್ದಾರೆ. ಭದ್ರತೆಯ ಕಾರಣ ನೀಡುವುದರಿಂದ ಕಾರವಾರವು ಸೇಫ್ ಅಲ್ಲ ಎನ್ನುವಂತಾಗಿದೆ ಎಂದು ಶಾಸಕ ಸತೀಶ ಸೈಲ್ ಹೇಳಿದ್ದಾರೆ.
ಕಾರವಾರದಲ್ಲಿ ಮಾತನಾಡಿದ ಅವರು, ಮೇ 4ರಿಂದ 8 ರವರೆಗೆ ಕರಾವಳಿ ಉತ್ಸವ ಮಾಡಲು ಸಿದ್ದರಾಗಿದ್ದೆವು. ಆದರೆ ಕೆಲವು ಅಡಚಣೆಗಳಾಗಿದೆ. ಕೆಲವೆಡೆ ತಪ್ಪು ಹುಡುಕುವ ಕೆಲಸವಾಗಿದೆ. ಕಾಶ್ಮೀರದ್ದಿ ನಡೆದ ಉಗ್ರರ ಅಟ್ಟಹಾಸದಿಂದ ಯುದ್ಧದ ಭೀತಿ ಇದೆ. ಹೀಗಾಗಿ ಸದ್ಯ ನಾವು ಕಾರ್ಯಕ್ರಮವನ್ನು ಮುಂದೂಡಿದ್ದೇವೆ. ಆದರೆ ದೇಶದಾದ್ಯಂತ ಎಲ್ಲಾ ಕಾರ್ಯಕ್ರಮಕಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಸಿ.ಎಸ್.ಕೆ ಹಾಗೂ ಆರ್.ಸಿ.ಬಿ ನಡುವೆ ಐಪಿಎಲ್ ಕ್ರಿಕೇಟ್ ಪಂದ್ಯ ನಡೆಯಲಿದೆ. ರಾಷ್ಟ್ರಪತಿ ಅವರು ಖೇಲೋ ಇಂಡಿಯಾ ನಡೆಸಿದ್ದಾರೆ. ಆದರೆ ಕಾರವಾರದಲ್ಲಿ ಮಾಡುವ ಉತ್ಸವಕ್ಕೆ ಮಾತ್ರ ತಡೆ ಏಕೆ. ನೌಕಾನೆಲೆ ಇರುವ ಕಾರಣ ಭದ್ರತೆಗೆ ನಿಲ್ಲಿಸಬೇಕು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಕೆಲವರು ಹೇಳುವಂತೆ ಕಾರವಾರ ಸೇಫ್ ಎನ್ನುವಂತಾಗಿದೆ ಎಂದರು.