
ಯಲ್ಲಾಪುರ: `ಭತ್ತದ ಬೀಜದಿಂದ ಬೀಜೋತ್ಪಾದನೆವರೆಗೆ\’ ಎಂಬ ವಿಷಯದ ಕುರಿತು ಮಾವಿನಕಟ್ಟಾದ ರೈತ ಉತ್ಪಾದಕ ಕಂಪನಿ ಜೂನ್ 15ರಂದು ಮಾಹಿತಿ ಹಾಗೂ ತರಬೇತಿ ಕಾರ್ಯಕ್ರಮ ನಡೆಸುತ್ತಿದೆ.
ಸ್ಕೋಡ್ವೆಸ್ ಹಾಗೂ ಇನ್ನಿತರ ಸಂಘಟನೆಗಳ ಸಹಯೋಗದಲ್ಲಿ ಬೆಳಗ್ಗೆ 10.30ಕ್ಕೆ ಈ ಕಾರ್ಯಕ್ರಮ ನಡೆಯಲಿದೆ. ಗುಣಮಟ್ಟದ ಬೀಜ ಆಯ್ಕೆ, ಬೀಜೋಪಚಾರ ಮಾಡುವ ವಿಧಾನ, ಭತ್ತ ಬೆಳೆಯುವ ಪದ್ಧತಿ, ಔಷಧ ಸಿಂಪಡನೆ, ಕಳೆ ನಿರ್ವಹಣೆ, ಕೊಯ್ಲು ಮತ್ತು ನಂತರ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗುತ್ತದೆ. ನಿವೃತ್ತ ಕೃಷಿ ಅಧಿಕಾರಿ ಡಿ ಜಿ ಪಟಗಾರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಮಾಹಿತಿಗೆ 9481917894ನ್ನು ಸಂಪರ್ಕಿಸಬಹುದು.