
ಯಲ್ಲಾಪುರ: ಹುಲಗೋಡದ ಸರ್ಕಾರಿ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ಏಕಲವ್ಯ ಘಟಕ ಸ್ಥಾಪಿಸಲಾಗಿದ್ದು, ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಇದನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು “ಶಾಲಾ ಹಂತದಲ್ಲಿ ದೊರೆಯುವ ಶಿಸ್ತು ಜೀವನದೂದ್ದಕ್ಕೂ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣ ಜೀವನ ಕೌಶಲ್ಯಗಳನ್ನು ಬೆಳೆಸುತ್ತದೆ\’\’ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕ ಸ್ಥಳೀಯ ಸಂಸ್ಥೆ ಅಧ್ಯಕ್ಷ ನಂದನ ಬಾಳಗಿ ವಿದ್ಯಾರ್ಥಿಗಳಿಗೆ ನೆರವು ನೀಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಶಿರಸಿ ಜಿಲ್ಲಾ ಮುಖ್ಯ ಆಯುಕ್ತ ವಿ. ಎಚ್ ಭಟ್ಕಳ, ಪ್ರಮುಖರಾದ ವಿರೇಶ ಮಾದರ, ಚಂದ್ರಶೇಖರ್ ಸಿ ಎಸ್, ಸುಧಾಕರ್ ನಾಯಕ, ಖೈರುನ್ ಶೇಖ್ ಇದ್ದರು.
ಸ್ಕೌಟ್ ಮಾಸ್ಟರ್ ಗಣೇಶ್ ಭಟ್ಟ ನಿರ್ವಹಿಸಿದರು. ಶಾಲಾ ಮುಖ್ಯಾಧ್ಯಾಪಕ ಚಂದ್ರೇಗೌಡ ಡಿ ಆರ್ ಸ್ವಾಗತಿಸಿದರು. ವಿನುತಾ ನಾಯ್ಕ ವಂದಿಸಿದರು.