
ಹಳಿಯಾಳ: ಬಸವೇಶ್ವರ ಸರ್ಕಲ್ ಹಾಗೂ ಯಲ್ಲಾಪುರ ನಾಕಾದಲ್ಲಿನ ಗೂಡಂಗಡಿಗಳಲ್ಲಿ ಅದೃಷ್ಟದ ಆಟ ಆಡಿಸುವುದಾಗಿ ಹೇಳಿಕೊಂಡು ಮಟ್ಕಾ ಚೀಟಿ ಬರೆಯುತ್ತಿದ್ದ ಇಬ್ಬರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಸೆಂಟ್ ಜವೀಯರ್ ಗಲ್ಲಿ ಮಾನ್ವೇಲ್ ಡಿಸೋಜಾ (41) ಹಾಗೂ ದೇಸಾಯಿಗಲ್ಲಿ ಉಡಚಪ್ಪ ಆಚಾರಿ (29) ಎಂಬಾತರು ಸಾರ್ವಜನಿಕರನ್ನು ಕರೆದು ಅವರಿಂದ ಹಣ ಕಟ್ಟಿಸಿಕೊಂಡು ಓಸಿ ಆಡಿಸುತ್ತಿದ್ದರು. 1 ರೂಪಾಯಿ ಕಟ್ಟಿದರೆ 80 ರೂ ನೀಡುವುದಾಗಿ ಆಮೀಷ ಒಡ್ಡಿ ಅನೇಕರಿಂದ ಹಣ ಸಂಗ್ರಹಿಸಿದ್ದರು. ಸಂಖ್ಯೆಗಳ ಮೇಲೆ ಹಣ ಹೂಡುವಂತೆ ಒತ್ತಾಯಿಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಆರೋಪಿಗಳಿಂದ ಸಂಖ್ಯೆಗಳನ್ನು ಬರೆದ ಚೀಟಿ, ಪೆನ್, ನಗದು ಹಾಗೂ ಇನ್ನಿತರ ಪರಿಕ್ಕರಗಳನ್ನು ವಶಕ್ಕೆ ಪಡೆದಿದ್ದಾರೆ.