ಶಿರಸಿ: ಬೈಕಿನಲ್ಲಿ ಮೂವರು ಸಂಚರಿಸುತ್ತಿದ್ದಾಗ ನಡೆದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಶೀರಾ ಎಂಬಾಕೆ ಸಾವನಪ್ಪಿದ್ದಾಳೆ.
ಜೂ 6ರಂದು ಬಶೀರಾ, ಶಾಹಿರಾ ಹಾಗೂ ಯಾಕೂಬ್ ಎಂಬಾತರು ಬೈಕಿನಲ್ಲಿ ಚಲಿಸುತ್ತಿದ್ದಾಗ ಅವರ ವಾಹನಕ್ಕೆ ಜೆಸಿಬಿ ಗುದ್ದಿತ್ತು. ಗಾಯಗೊಂಡ ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದರು. ಗಂಭೀರ ಗಾಯಗೊಂಡಿದ್ದ, ಅನಾರೋಗ್ಯಕ್ಕೆ ಒಳಗಾದ ಬಶೀರಾರನ್ನು ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನಪ್ಪಿದ್ದಾಳೆ.