
ಭಟ್ಕಳ: ಮುರುಡೇಶ್ವರದಿಂದ ಭಟ್ಕಳಕ್ಕೆ ಹೊರಟ ಕಪ್ಪು ಬಣ್ಣದ ಕಾರೊಂದು ರಸ್ತೆಯಲ್ಲಿ ಸಾಗುತ್ತಿದ್ದ ಮೂವರಿಗೆ ಡಿಕ್ಕಿ ಹೊಡೆದಿದ್ದು, ಅದರಲ್ಲಿ ಒಬ್ಬ ಸಾವನಪ್ಪಿದ್ದಾನೆ.
ಶಿರಾಲಿ ಚಿತ್ರಾಪುರದ ಬಳಿ ಬೈಕಿನಲ್ಲಿ ಹೋಗುತ್ತಿದ್ದ ಮೀನುಗಾರ ರಾಮಚಂದ್ರ ಮೊಗೇರ್ ಅವರಿಗೆ ಮೊದಲು ಈ ಕಾರು ಗುದ್ದಿದೆ. ನಂತರ ಮುಂದೆ ಭಟ್ಕಳದಲ್ಲಿ ರವಿಶಂಕರ ನಾಯ್ಕ ಹಾಗೂ ಪ್ರತಿಕ್ಷಾ ನಾಯ್ಕರಿಗೆ ಗುದ್ದಿ ಗಾಯ ಮಾಡಿದೆ. ಅದಾದ ಮೇಲೆ ಕಾರು ಚಾಲಕ ಕಾರನ್ನು ಅಲ್ಲಿಯೇ ಬಿಟ್ಟು ನಾಪತ್ತೆಯಾಗಿದ್ದಾನೆ. ಮೀನುಗಾರ ರಾಮಚಂದ್ರ ನಾಯ್ಕ ಅವರ ತಲೆಗೆ ಪೆಟ್ಟಾಗಿ ಅವರು ಸಾವನಪ್ಪಿದ್ದಾರೆ. ಇದೀಗ ಪೊಲೀಸರು ಕಾರು ಚಾಲಕನ ಹುಡುಕಾಟದಲ್ಲಿದ್ದಾರೆ.