
ಶಿರಸಿ: ಬನವಾಸಿಯಲ್ಲಿ ವಾಸವಾಗಿದ್ದ ಮಹಾದೇವಿ ರೆಡ್ಡಿ (25 ವರ್ಷ) ಎಂಬಾಕೆ ಅತಿಯಾದ ಮದ್ಯ ಸೇವನೆಯಿಂದ ಸಾವನಪ್ಪಿದ್ದಾಳೆ.
ಬನವಾಸಿ ಬಸ್ ನಿಲ್ದಾಣದ ಹಿಂದೆ ಈಕೆ ವಾಸವಾಗಿದ್ದಳು. ಕೂಲಿ ಕೆಲಸ ಮಾಡಿಕೊಂಡಿದ್ದ ಈಕೆ ಈಚೆಗೆ ಮದ್ಯ ವ್ಯಸನವನ್ನು ಕಲಿತಿದ್ದಳು. ಸ್ವಲ್ಪ ದಿನಗಳ ಹಿಂದೆ ಆಕೆಯ ಆರೋಗ್ಯ ಹದಗೆಟ್ಟಿತ್ತು. ಇದರಿಂದ ಮಾನಸಿಕವಾಗಿಯೂ ಕುಗ್ಗಿದ್ದಳು. ಒಮ್ಮೆಲೇ ವಿಪರೀತ ಮದ್ಯ ಸೇವಿಸಿದ ಈಕೆ ನಂತರ ಅಲ್ಲಿಯೇ ಕುಸಿದು ಬಿದ್ದು ಸಾವನಪ್ಪಿದ್ದಾಳೆ.