
Exif_JPEG_420
ಸಂಸದರಾಗಿ ಆಯ್ಕೆಯಾದ ನಂತರ ಮೊದಲ ಬಾರಿ ಯಲ್ಲಾಪುರಕ್ಕೆ ಆಗಮಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಿಜೆಪಿ ಘಟಕದವರು ಶ್ರೀರಾಮನ ಫೋಟೋ ನೀಡಿ ಗೌರವಿಸಿದ್ದು, ಆ ಫೋಟೋವನ್ನು ಸಾರ್ವಜನಿಕರಿಗೆ ಪ್ರದರ್ಶಿಸಿದ ಕಾಗೇರಿ `ಜೈಶ್ರೀರಾಮ್\’ ಎಂದು ಘೋಷಣೆ ಕೂಗಿದರು.
ಗೌರವ ಸ್ವೀಕರಿಸಿ ಮಾತನಾಡಿದ ಅವರು `ಪ್ರಧಾನಿ ನರೇಂದ್ರ ಮೋದಿ ಅವರ ನೇತ್ರತ್ವದಲ್ಲಿ ಬಿಜೆಪಿಗೆ ಸಾಕಷ್ಟು ಶಕ್ತಿ ಬಂದಿದ್ದು, ಚಲಾವಣೆಯಾದ ಒಟ್ಟು ಮತದಲ್ಲಿ ಶೇ 67ರಷ್ಟು ಬಿಜೆಪಿಗೆ ಬಂದಿದೆ. ಕಾರ್ಯಕರ್ತರು ಭಕ್ತಿಯಿಂದ ಕೆಲಸ ಮಾಡಿದ ಕಾರಣ ಬಿಜೆಪಿಗೆ ಇನ್ನಷ್ಟು ಶಕ್ತಿ ಬಂದಿದೆ\’ ಎಂದರು. ತಮ್ಮ ಭಾಷಣದ ಕೊನೆಯಲ್ಲಿ ಸಹ ಮೂರು ಬಾರಿ `ಜೈಶ್ರೀರಾಮ್\’ ಎಂಬ ಘೋಷಣೆ ಕೂಗಿದರು. ನೆರೆದಿದ್ದ ಜನ ಸಹ ಅವರಿಗೆ ಧ್ವನಿಯಾದರು.