
ಯಲ್ಲಾಪುರ: ಪ್ರವಾಸಕ್ಕಾಗಿ ಸಾತೊಡ್ಡಿ ಜಲಪಾತಕ್ಕೆ ಬಂದಿದ್ದ ಹುಬ್ಬಳ್ಳಿಯ ಹಸನ್ (೩೬ ವರ್ಷ) ಎಂಬಾತ ಜಲಪಾತದ ಸುಳಿಗೆ ಸಿಲುಕಿ ಸಾವನಪ್ಪಿದ್ದಾನೆ.
ಹುಬ್ಬಳ್ಳಿ ಮೌಲಾಲಿ ದರ್ಗಾ ಬಳಿ ನಿವಾಸಿಯಾಗಿದ್ದ ಈತ ಕೂಲಿ ಕೆಲಸ ಮಾಡಿಕೊಂಡಿದ್ದ. ಮಂಗಳವಾರ ಸಂಜೆ ತನ್ನ ಸಂಬoಧಿಕರು ಹಾಗೂ ಗೆಳೆಯರ ಜೊತೆ ಸಾತೊಡ್ಡಿ ಜಲಪಾತಕ್ಕೆ ಬಂದು, ಮೋಜು-ಮಸ್ತಿಯಲ್ಲಿ ತೊಡಗಿದ್ದ. ನಂತರ ಸ್ನಾನ ಮಾಡಲು ನೀರಿಗೆ ಇಳಿದ ಈತನ ಕಾಲು ಜಾರಿದ್ದು, ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾನೆ.