
ಕುಮಟಾ: ಮುದೋಳದ ಕಾರು ಚಾಲಕ ಕುಮಟಾದ ಬೀದಿನಾಯಿಗೆ ಬೆದರಿ ಕಾರನ್ನು ಹೊಂಡಕ್ಕೆ ಬೀಳಿಸಿದ್ದು, ಇಬ್ಬರಿಗೆ ಗಾಯವಾಗಿದೆ.
ಹೊನ್ನಾವರ ಕಡೆಯಿಂದ ಕುಮಟಾ ಕಡೆ ಮುದೋಳದ ಸುರೇಶ ಬರಿಗಲ್ ಎಂಬಾತ ಕಾರು ಚಲಾಯಿಸುತ್ತಿದ್ದ. ಬೆಳಗಾವಿ ಸಂತೋಷ ಸಿಡಲಾಳ ಎಂಬ ವ್ಯಾಪಾರಿ ಚಾಲಕನ ಪಕ್ಕದ ಆಸನದಲ್ಲಿದ್ದ. ಹಂದಿಗೋಣದ ಬಳಿ ಕಾರಿಗೆ ನಾಯಿ ಅಡ್ಡಬಂದಿದ್ದು, ಇದರಿಂದ ಹೆದರಿದ ಚಾಲಕ ಕಾರನ್ನು ಏಕಾಏಕಿ ಬಲಕ್ಕೆ ತಿರುಗಿಸಿದ್ದಾನೆ. ಕಾರು ನೇರವಾಗಿ ಅಲ್ಲಿನ ಹೊಂಡಕ್ಕೆ ಬಿದ್ದಿದ್ದರಿಂದ ಚಾಲಕನ ಜೊತೆಗಿದ್ದ ವ್ಯಾಪಾರಿಗೂ ಗಾಯವಾಗಿದೆ. ಕಾರು ಜಖಂ ಆಗಿದೆ.