ಮುಂಡಗೋಡ: ಚಲಿಸುತ್ತಿದ್ದ ಬೈಕ್ ಮೇಲೆ ಮಾವಿನ ಮರ ಉರುಳಿ ಬಿದ್ದಿದ್ದರಿಂದ ಮಗುವಿನ ಜೊತೆ ಹೋಗುತಿದ್ದ ದಂಪತಿ ಗಾಯಗೊಂಡಿದ್ದಾರೆ.
ಪಾಳಾ ಕ್ರಾಸ್ ಶಿರಸಿ – ಹುಬ್ಬಳ್ಳಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಚಿಟಗೇರಿ ಗ್ರಾಮದ ಪರಶುರಾಮ ಸಿದ್ದಪ್ಪ ನಾಯ್ಕರ, ಮಧು ಸಿದ್ದಪ್ಪ ನಾಯ್ಕರ ಹಾಗೂ ಒಂದೂವರೆ ವರ್ಷದ ಧನವೀರ್ ಪರಶುರಾಮ ನಾಯ್ಕರ ಮೇಲೆ ಮರ ಬಿದ್ದಿದೆ. ಪಾಳಾ ಗ್ರಾಮದಿಂದ ಮುಂಡಗೋಡ ಕಡೆಗೆ ಅವರು ಬರುತ್ತಿದ್ದರು. ಆಗ, ಈ ಅವಘಡ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಮುಂಡಗೋಡ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮರವನ್ನು ತೆರವುಗೊಳಿಸಲಾಗಿದೆ.