ಕುಮಟಾ: ಮದುವೆಗೆ ಅಗತ್ಯವಿರುವ ಜವಳಿ ತರಲು ಧಾರೇಶ್ವರದಿಂದ ಹುಬ್ಬಳ್ಳಿಗೆ ಹೋಗಿ ಮನೆಗೆ ಮರಳಿದ್ದ ನಾಗೇಂದ್ರ ಅಂಬಿಗ (39) ಎಂಬಾತ ನಾಪತ್ತೆಯಾಗಿದ್ದಾನೆ.
ಧಾರೇಶ್ವರದ ದೇವಗಿರಿಮಠದವನಾಗಿದ್ದ ಈತ ಮೀನುಗಾರಿನೆ ನಡೆಸಿ ಬದುಕು ಕಟ್ಟಿಕೊಂಡಿದ್ದ. ಆತನಿಗೆ ಮದುವೆ ನಿಶ್ಚಯವಾಗಿದ್ದು, ಮದುವೆಗೆ ಅಗತ್ಯವಿರುವ ಬಟ್ಟೆಗಳನ್ನು ತರಲು ಜೂ 20ರಂದು ಹುಬ್ಬಳ್ಳಿಗೆ ಹೋಗಿದ್ದ. ಬಟ್ಟೆ ಖರೀದಿಸಿ ಆತ ಜೂ 21ರಂದು ಮನೆಗೆ ಮರಳಿದ್ದು, ಮಧ್ಯಾಹ್ನ 1 ಗಂಟೆಗೆ ಊಟ ಮಾಡಿ ಮಲಗಿದವ 4 ಗಂಟೆಯ ನಂತರ ಯಾರಿಗೂ ಕಂಡಿಲ್ಲ. ಆತನ ತಮ್ಮ ಸತೀಶ್ ಅಂಬಿಗ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿಲ್ಲ.