
ಶಿರಸಿ: ಜೂ 27ರಂದು ಬೆಳಗ್ಗೆ 11 ಗಂಟೆಗೆ ಶಿರಸಿ ಪ್ರವಾಸಿ ಮಂದಿರ ಹಾಗೂ ಜೂ 28ರಂದು ಬೆಳಿಗ್ಗೆ 11 ಗಂಟೆಗೆ ಸಿದ್ದಾಪುರ ಪ್ರವಾಸಿ ಮಂದಿರ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆ ಆಲಿಸಲಿದ್ದಾರೆ
ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕ ಕೆಲಸ ಆಗದ ಬಗ್ಗೆ ದೂರು ಸಲ್ಲಿಸಬಹುದು. ಜೊತೆಗೆ ನೌಕರರು ಲಂಚ ಬೇಡಿದಲ್ಲಿಯೂ ದಾಖಲೆ ಒದಗಿಸಬಹುದು. ಸರ್ಕಾರಿ ಹಣ ದುರುಪಯೋಗ, ಕರ್ತವ್ಯ ಲೋಪ, ಕಳಪೆ ಕಾಮಗಾರಿ ವಿಷಯದ ಕುರಿತು ಸಹ ದೂರು ನೀಡಲು ಅವಕಾಶವಿದ್ದು, ಮಾಹಿತಿಗೆ ಲೋಕಾಯುಕ್ತ ಎಸ್ಪಿ 9364062527, ಲೋಕಾಯುಕ್ತ ಪಿಐ 9364062676 ಅವರಿಗೆ ಸಂಪರ್ಕಿಸಿ ಇನ್ನಷ್ಟು ವಿವರ ಪಡೆಯಬಹುದು.