
ದಾಂಡೇಲಿ: ಬೈಲಪಾರ ಪೈರೋಜ್ ಯಾಸಿನ್ ಯರಗಟ್ಟಿ ಎಂಬಾತ ಬೈಲಪಾರದ ಚರ್ಚಿನ ಮುಂದೆ ನಿಂತು ಸರಾಯಿ ಮಾರುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ.
ಚಾಲಕನಾಗಿರುವ ಈತ ಜೂ 24ರ ಸಂಜೆ 4.15ರ ಸುಮಾರಿಗೆ ಚರ್ಚಿಗೆ ಬಂದು ಹೋಗುವವರಿಗೆ ಸರಾಯಿ ಮಾರಾಟ ಮಾಡುತ್ತಿದ್ದ. ನೀಲಿ ಬಣ್ಣದ ಕೈಚೀಲ ಹಾಗೂ ರಟ್ಟಿನ ಬಾಕ್ಸಿನಲ್ಲಿ ಅಕ್ರಮ ಮದ್ಯದ ಪಾಕೇಟ್ ಇರಿಸಿಕೊಂಡು ವ್ಯಾಪಾರ ನಡೆಸುತ್ತಿದ್ದ. ಈ ಬಗ್ಗೆ ಸುಳಿವು ದೊರೆತ ಪೊಲೀಸರು ಆತನ ಮೇಲೆ ದಾಳಿ ನಡೆಸಿ ವ್ಯಾಪಾರವನ್ನು ನಿಲ್ಲಿಸಿದರು. ಈತನ ಬಳಿಯಿದ್ದ ವಿವಿಧ ಬ್ರಾಂಡಿನ ಮದ್ಯಗಳನ್ನು ಅವರು ನಾಶಮಾಡಿದರು.