
ಶಿರಸಿ: ಈಗಾಗಲೇ ಮದುವೆಯಾಗಿದ್ದ ಮಫಿದಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಕಸ್ತೂರಿಬಾ ನಗರದ ಇಬ್ರಾಹಿಂ ಮಲ್ಲಿಕ್ಕನವರ್ (25) ಎಂಬಾತ ಆಕೆ ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಇಬ್ರಾಹಿಂ ಮಫಿದಾ ಎಂಬ ವಿವಾಹಿತೆಯ ಹಿಂದೆ ಬಿದ್ದಿದ್ದ. ಆಕೆಯ ಗಂಡನಿAದ ವಿಚ್ಚೇದನ ಕೊಡಿಸಿ, ತಾನು ಮದುವೆ ಆಗುವ ತಯಾರಿ ನಡೆಸಿದ್ದ. ಆದರೆ, ಆಕೆಯ ಗಂಡನಿAದ ವಿಚ್ಚೇದನ ದೊರೆತಿರಲಿಲ್ಲ. ಇದನ್ನು ಮನಸ್ಸಿಗೆ ಹಚ್ಚಿಕೊಂಡ ಈತ ಜೂ 24ರ ರಾತ್ರಿ ತನ್ನ ಕೋಣೆಗೆ ಹೋಗಿ ಕುತ್ತಿಗೆಗೆ ಹಗ್ಗ ಬಿಗಿದುಕೊಂಡಿದ್ದ. ಇದನ್ನು ನೋಡಿದ ಆತನ ತಾಯಿ ಸಾಹಿರಾ ತಕ್ಷಣ ಆತನನ್ನು ರಕ್ಷಿಸಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಳು. ಆದರೆ, ಅದು ಪ್ರಯೋಜನಕ್ಕೆ ಬಾರದೇ ಆತ ಸಾವನಪ್ಪಿದ್ದಾನೆ.