
ಕಾರವಾರ: ಗೋಪಿಶೆಟ್ಟಾ ಅರಣ್ಯ ಪ್ರದೇಶದ ಗೋಟೆಗಾಳಿಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿದ್ದ ಪ್ರದೀಪ ಪಾಟೀಲ್ (49 ವರ್ಷ) ಎಂಬಾತರು ದೇಹದಲ್ಲಿನ ಬಿಪಿ ಹಾಗೂ ಶುಗರ್ ಪ್ರಮಾಣವನ್ನು ನಿಯಂತ್ರಿಸಲಾಗದೇ ಸಾವನಪ್ಪಿದ್ದಾರೆ.
ಪ್ರದೀಪ ಪಾಟೀಲ್ ಮೂಲತಃ ಹಳಿಯಾಳದ ಮುರ್ಕವಾಡದವರು. ಅತಿಯಾದ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಯಿoದ ಬಳಲುತ್ತಿದ್ದ ಅವರು ಇದಕ್ಕಾಗಿ ಔಷಧಿಯನ್ನು ಸಹ ತೆಗೆದುಕೊಳ್ಳುತ್ತಿದ್ದರು. ಆದರೆ, ಯಾವುದೇ ಪರಿಣಾಮ ಕಂಡಿರಲಿಲ್ಲ. ಜೂ 25ರಂದು ಅವರ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿದ್ದು, ಅವರನ್ನು ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಲ್ಲಿನ ಚಿಕಿತ್ಸೆಗೆ ಅವರು ಸ್ಪಂದಿಸದೇ ಕೊನೆ ಉಸಿರೆಳೆದರು.