
ಕಾರವಾರ: ಮುಂಬೈನ ಸುಪ್ರೀತ್ ಸಿಂಗ್ ಹಾಗೂ ಮಂಗಳೂರಿನ ಅಶ್ಪಕಾ ಅಬ್ಬಾಸ್ ಎಂಬಾತರು ಸದಾಶಿವಗಡದ ಮಿಥಿಲೇಶ್ ಪಾಂಡುರoಗ ನಾಯ್ಕ ವಿರುದ್ಧ ಮುಂಬೈ ಹಾಗೂ ಕಾರವಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ನಂತರ ಅವರನ್ನು ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ್ದಾರೆ.
ಸುಪ್ರೀತ್ ಸಿಂಗ್ ಹಾಗೂ ಮಂಗಳೂರಿನ ಅಶ್ಪಕಾ ಅಬ್ಬಾಸ್ ಎಂಬಾತರ ಜೊತೆ ಮಿಥಿಲೇಶ್ ಪಾಂಡುರoಗ ನಾಯ್ಕ ಆರ್ಥಿಕ ವ್ಯವಹಾರ ಹೊಂದಿದ್ದರು. ಆದರೆ, ಇದಲ್ಲಿ ಅವರಿಗೆ ನಷ್ಟವಾಗಿದ್ದರಿಂದ ಅದನ್ನು ಮುರಿದುಕೊಂಡಿದ್ದರು. ಹಣಕಾಸಿನ ವ್ಯವಹಾರ ನಡೆಸದ ಕಾರಣ ಮುಂಬೈ ಹಾಗೂ ಕಾರವಾರದಲ್ಲಿ ಮಿಥಿಲೇಶ್ ಪಾಂಡುರoಗ ನಾಯ್ಕ ವಿರುದ್ಧ ಎದುರುದಾರರು ವಂಚನೆ ಪ್ರಕರಣ ದಾಖಲಿಸಿದ್ದರು. `ತನಗೆ ಅನಗತ್ಯವಾಗಿ ಸುಪ್ರೀತ್ ಸಿಂಗ್ ಹಾಗೂ ಅಶ್ಪಕಾ ಅಬ್ಬಾಸ್ ತೊಂದರೆ ಮಾಡುತ್ತಿದ್ದಾರೆ\’ ಎಂದು ಮಿಥಿಲೇಶ್ ಪಾಂಡುರoಗ ನಾಯ್ಕ ಸಹ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದರು. ಇದರಿಂದ ಸಿಟ್ಟಾದ ಆ ಇಬ್ಬರು ಜೂ 24ರ ಸಂಜೆ ಸದಾಶಿವಗಡದ ಪಿಂಪಲಕಟ್ಟಾ ಬಳಿ ಪಾಂಡುರoಗ ನಾಯ್ಕರನ್ನು ಅಡ್ಡಗಟ್ಟಿ, ಬೈದು ಹಲ್ಲೆಗೆ ಯತ್ನಿಸಿದ್ದಾರೆ. ಜೊತೆಗೆ ಜೀವ ಬೆದರಿಕೆ ಒಡ್ಡಿದ್ದು, ಇದೀಗ ಮಿಥಿಲೇಶ್ ಪಾಂಡುರoಗ ನಾಯ್ಕ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.