
ಕಾರವಾರ: `ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು\’ ಎಂದು ಪೊಲೀಸ್ ದೂರು ನೀಡಿರುವ ಸದಾಶಿವಗಡದ ಮಿಥಿಲೇಶ್ ಪಾಂಡುರoಗ ನಾಯ್ಕ ಸಹ ತನ್ನ ಮೂವರು ಸಹಚರರ ಜೊತೆ ಸೇರಿ ಮಂಗಳೂರಿನ ಮಹ್ಮದ್ ಅಶ್ವಾಕ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.
ಮಹ್ಮದ್ ಅಶ್ವಾಕ್ ಗೋವಾದ ಪೊಲೀಸ್ ಠಾಣೆಗೆ ತೆರಳಿ ಅಲ್ಲಿಂದ ಮರಳುವಾಗ ಹಿಂಬಾಲಿಸಿಕೊoಡು ಬಂದ ಮಿಥಿಲೇಶ್ ಹಾಗೂ ಸಹಚರರು ಮಾಜಾಳಿಯ ಬಳಿ ಮಹ್ಮದ್ ಅಶ್ವಾಕ್\’ನ ಬೈಕಿಗೆ ಒದ್ದಿದ್ದಾರೆ. ಬೈಕ್ ನಿಯಂತ್ರಣ ತಪ್ಪಿ ನೆಲಕ್ಕೆ ಅಪ್ಪಳಿಸಿದಾಗ ಸವಾರ ಮಹ್ಮದ್ ಅಶ್ವಾಕ್ ಪ್ರಜ್ಞೆ ತಪ್ಪಿದ್ದು, ನಂತರ ಆತನನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತರಿಸಿಕೊಂಡ ಮಹ್ಮದ್ ಅಶ್ವಾಕ್ ನಾಲ್ವರ ದಬ್ಬಾಳಿಕೆಯಿಮದ ಹೆದರಿ ದೂರು ನೀಡಿರಲಿಲ್ಲ. ಜೊತೆಗೆ ಮಿಥಿಲೇಶ್ ಹೊರತುಪಡಿಸಿ ಉಳಿದವರ ಹೆಸರು ಸಹ ಗೊತ್ತಿರಲಿಲ್ಲ. ಇದೀಗ `ಮಿಥಿಲೇಶ್ ತನ್ನ ಮೇಲೆ ಹಲ್ಲೆ ನಡೆಸಿ, ತನ್ನ ವಿರುದ್ಧವೇ ದೂರು ನೀಡಿದ್ದಾನೆ\’ ಎಂದು ಅರಿತ ಮಹ್ಮದ್ ಅಶ್ವಾಕ್ ತನ್ನ ಮೇಲೆ ಹಲ್ಲೆ ನಡೆಸಿದ ಮಿಥಿಲೇಶ್ ನಾಯ್ಕ, ಮುಂಬೈನ ರವಿ ಬಾಕ್ರು, ಗೋವಾದ ಆಸಿಪ್ ಅಹ್ಮದ್ ಹಾಗೂ ಸದಾಶಿವಗಡದ ಉಪೇಂದ್ರ ಗೋವೇಕರ್ ಎಂಬಾತರ ವಿರುದ್ಧ ದೂರು ನೀಡಿದ್ದು, ತನಿಖೆ ಮುಂದುವರೆದಿದೆ.