
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಕುಮಟಾ – ಸಿದ್ದಾಪುರ ರಸ್ತೆ ಜಲಾವೃತಗೊಂಡಿದೆ. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುವುದು ಅಪಾಯಕಾರಿ.
ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಪ್ರವಾಸಗಳನ್ನು ಮುಂದುಡುವುದು ಒಳಿತು. ತುರ್ತು ಕಾರಣಗಳಿಂದ ಪ್ರಯಾಣ ಮಾಡುವವರು ಹೆದ್ದಾರಿ ನಿರ್ಮಾಣ ಕೆಲಸ ಅರೆಬರೆಯಾಗಿದನ್ನು ಗಮನಿಸಿ, ಮುಂದೆ ಸಾಗಿ.
ಇನ್ನೂ ಮಳೆ ಅಬ್ಬರಕ್ಕೆ ಭಟ್ಕಳದ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿದೆ. ಹೀಗಾಗಿ ಅಲ್ಲಿಯೂ ಸಹ ಪ್ರಯಾಣಿಕರಿಗೆ ಅನಾನುಕೂಲವಾದಿತು. ಭಟ್ಕಳದ ಹೆಬಳೆ ಗ್ರಾಮದ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ. ಮುರುಡೇಶ್ವರದ ಅಯ್ಯಪ್ಪಸ್ವಾಮಿ ದೇವಾಲಯಕ್ಕೂ ನೀರು ನುಗ್ಗಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮಳೆ ಇನ್ನಷ್ಟು ಚುರುಕಾಗುವ ಸಾಧ್ಯತೆಗಳಿವೆ.