
oplus_262144
ಶಿರಸಿ: `ಜುಲೈ 1ರಿಂದ ಎಲ್ಲಾ ಗ್ರಾಮಗಳಲ್ಲಿನ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಬೇಕು. ಶಾಲೆ, ಬಸ್ ನಿಲ್ದಾಣ, ಆರೋಗ್ಯ ಕೇಂದ್ರಗಳ ಸುತ್ತಲಿನ ವಾತಾವರಣ ಸ್ವಚ್ಛವಾಗಿರಬೇಕು\’ ಎಂದು ಶಿರಸಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಹೆಗಡೆ ಅಧೀನ ಅಧಿಕಾರಿಗಳಿಗೆ ಸೂಚಿಸಿದರು.
ಬದನಗೋಡ ಹಾಗೂ ಅಂಡಗಿ ಗ್ರಾಮ ಪಂಚಾಯತಗೆ ಭೇಟಿ ನೀಡಿದ ಅವರು ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿದರು. `ಕುಡಿಯುವ ನೀರು ಹಾಗೂ ಬಡವರಿಗೆ ಮನೆ ನೀಡುವ ವಿಷಯದಲ್ಲಿ ಲೋಪ ಆಗಬಾರದು\’ ಎಂದು ಸೂಚಿಸಿದರು. ಬಾಕಿ ಇರುವ ಮನೆಕರ ವಸೂಲಿ ಮಾಡುವಂತೆ ತಿಳಿಸಿದರು. ನರೇಗಾ ಯೋಜನೆ, ಪ್ರೊಫೈಲ್ ಅಪಡೇಷನ್, ಇ-ಸ್ವತ್ತು, ಬಸವ ವಸತಿ ಮನೆ, ಕುಡಿಯುವ ನೀರು, ವಿಶೇಷ ಸ್ವಚ್ಛತಾ ಅಭಿಯಾನ ಸೇರಿದಂತೆ ವಸೂಲಾತಿ, ಕಾಮಗಾರಿಗಳ ದಾಖಲೆಗಳ ನಿರ್ವಹಣೆ, ವಿದ್ಯುತ್ ಬಿಲ್, ವಾಟರ್ ಟೆಸ್ಟ್ ಕುರಿತು ಸೂಚನೆಗಳನ್ನು ನೀಡಿದರು.
ತಾಲೂಕು ಪಂಚಾಯತ್ ವ್ಯವಸ್ಥಾಪಕ ಸುಬ್ರಾಯ ಭಟ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ.ಪಿ ಲಮಾಣಿ ಹಾಗೂ ಪರಶುರಾಮ್ ಇತರರಿದ್ದರು.