
ಅಂಗಡಿಬೈಲ್ ಬಸ್ ನಿಲ್ದಾಣದಲ್ಲಿ ಅಶಕ್ತನಾಗಿ ಬಿದ್ದು ಹುಳಗಳಿಂದ ಕೂಡಿದ್ದ ವ್ಯಕ್ತಿಯನ್ನು ನಾಗರಾಜ ನಾಯ್ಕ ರಕ್ಷಿಸಿದರು
ಸಿದ್ದಾಪುರ: ಅಂಕೋಲಾ ತಾಲೂಕಿನ ಅಂಗಡಿಬೈಲ್ ಬಸ್ ನಿಲ್ದಾಣದಲ್ಲಿ ಅನಾಥವಾಗಿ ಬಿದ್ದಿದ್ದ ಕೃಷ್ಣ ಹೆಗಡೆ ಎಂಬಾತರ ಮುಖ ಹಾಗೂ ಕುತ್ತಿಗೆ ಕೊಳೆತು ಹುಳಗಳಾಗಿದ್ದು, ಈ ವಿಷಯ ತಿಳಿದ ಸಿದ್ದಾಪುರದ ಅಕ್ಷರಕ್ರಾಂತಿ ನಾಗರಾಜ ನಾಯ್ಕ ಅವರನ್ನು ತಮ್ಮ ಆಶ್ರಮಕ್ಕೆ ಕರೆದೊಯ್ದಿದ್ದಾರೆ.
ಕಳೆದ ಕೆಲ ದಿನಗಳಿಂದ ಕೃಷ್ಣ ಹೆಗಡೆ ಬಸ್ ನಿಲ್ದಾಣದಲ್ಲಿ ವಾಸವಾಗಿದ್ದರು. ಜಿ ಪಂ ಮಾಜಿ ಸದಸ್ಯ ಜಿ ಎಂ ಶೆಟ್ಟಿ ಅವರನ್ನು ನೋಡಿ ಶಿರಸಿಯ ಸ್ಕೋಡ್ವೆಸ್ ಮುಖ್ಯಸ್ಥ ವೆಂಕಟೇಶ್ ನಾಯ್ಕ ಅವರಿಗೆ ಮಾಹಿತಿ ನೀಡಿದ್ದರು. ವೆಂಕಟೇಶ್ ನಾಯ್ಕ ಅವರು ನಾಗರಾಜ ಅವರನ್ನು ಸಂಪರ್ಕಿಸಿ ಅವರ ಬಗ್ಗೆ ತಿಳಿಸಿದ್ದು, ತಕ್ಷಣ ಧಾವಿಸಿದ ನಾಗರಾಜ ನಾಯ್ಕರು ಅಸಹಾಯಕ ಸ್ಥಿತಿಯಲ್ಲಿದ್ದ ಹೆಗಡೆ ಅವರನ್ನು ತಮ್ಮ ಆಶ್ರಮಕ್ಕೆ ಕರೆತಂದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಕೆಲವರು ಆರ್ಥಿಕ ನೆರವು ನೀಡಿದ್ದು, ಸಿದ್ದಾಪುರ ಆಸ್ಪತ್ರೆಯಲ್ಲಿ ಕೃಷ್ಣ ಹೆಗಡೆಯವರಿಗೆ ಚಿಕಿತ್ಸೆ ನಡೆಯುತ್ತಿದೆ.
ಮುಖ ಹಾಗೂ ಕುತ್ತಿಗೆ ಕೊಳೆತು ಹುಳ ಆಗಿರುವುದರಿಂದ ಅವರಿಗೆ ಊಟ ಮಾಡಲು ಆಗುತ್ತಿಲ್ಲ. ಹೀಗಾಗಿ ಮೂಗಿನಲ್ಲಿ ಪೈಪ್ ಇಳಿಸಿ ಆಹಾರ ನೀಡಲಾಗುತ್ತಿದೆ.