
ಶಿರಸಿ: ಇಂದಿರಾನಗರದ ಬಳಿಯ ಸ್ಮಶಾನ ರಸ್ತೆಯಲ್ಲಿ ಅಂಕಿ-ಸoಖ್ಯೆಗಳ ಆಟವಾಡಿಸುತ್ತಿದ್ದ ರಾಜಪ್ಪ ನಾಯ್ಕ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಣೇಶನಗರದ ಈತ ಕೂಲಿ ಕೆಲಸ ಮಾಡಿ ಜೀವಿಸುತ್ತಿದ್ದ. ಬೇರೆಯವರ ಮಾತು ಕೇಳಿ ಜೂಜಾಟ ನಡೆಸಲು ಆಸಕ್ತಿ ತೋರಿದ್ದ. ಅದೃಷ್ಟ ಒಲಿದರೆ ಕಾಸು ಬರುತ್ತದೆ ಎಂದು ನಂಬಿದ್ದ ಈತ ಜೂ 28ರಂದು ಸ್ಮಶಾನದ ಅಂಚಿನ ರಸ್ತೆಯಲ್ಲಿ ಕೈ ಸನ್ನೆ ಮೂಲಕ ಜನರನ್ನು ಕರೆದು ಅಂಕಿ-ಸoಖ್ಯೆಗಳ ಮೇಲೆ ಹಣ ಕಟ್ಟಿಸಿಕೊಳ್ಳುತ್ತಿದ್ದ. ಪೊಲೀಸರು ದಾಳಿ ನಡೆಸಿದಾಗ ಆತನ ಅದೃಷ್ಟ ಕೈ ಕೊಟ್ಟಿದ್ದರಿಂದ ಆತ ಅಂದು ದುಡಿದ 620ರೂ ಸಹ ಕಳೆದುಕೊಂಡಿದ್ದಾನೆ.