
ಅಂಕೋಲಾ: ಬಂಕಿಕೊಡ್ಲದ ಶೇಖರ್ ಆಗೇರ್ (19) ಎಂಬಾತ ಲಾರಿ ಹಿಂದಿಕ್ಕಲು ಹೋಗಿ, ಅದೇ ಲಾರಿಯ ಚಕ್ರಕ್ಕೆ ಸಿಲುಕಿ ಸಾವನಪ್ಪಿದ್ದಾನೆ. ಈ ಅಪಘಾತದಲ್ಲಿ ಭೂಮಿಕಾ ಆಗೇರ್ ಎಂಬ ವಿದ್ಯಾರ್ಥಿನಿಗೆ ಗಾಯವಾಗಿದೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಹನೆಹಳ್ಳಿಯ ಶೇಖರ್ ಆಗೇರ್ ಜೂ 28ರ ಸಂಜೆ ಭೂಮಿಕಾ ಆಗೇರ್ ಎಂಬ ವಿದ್ಯಾರ್ಥಿನಿಯನ್ನು ಕೂರಿಸಿಕೊಂಡು ಹಿಲ್ಲೂರಿನಿಂದ ಮಾದನಗೇರಿ ಕಡೆ ಹೊರಟಿದ್ದ. ಮುಂದೆ ಹೋಗುತ್ತಿದ್ದ ಲಾರಿಯನ್ನು ಹಿಂದಿಕ್ಕಲು ಆತ ಬೈಕ್ ಜೋರಾಗಿ ಓಡಿಸಿದ್ದು, ಆ ವೇಳೆ ಎದುರಿನಿಂದ ವಾಹನ ಬಂದದನ್ನು ನೋಡಿ ಬೈಕ್ ನಿಧಾನ ಮಾಡಿದ್ದ. ಆ ವೇಳೆ, ಬೈಕ್ ಲಾರಿಯ ಡಿಸೇಲ್ ಟ್ಯಾಂಕಿಗೆ ತಾಗಿ ಇಬ್ಬರು ನೆಲಕ್ಕೆ ಅಪ್ಪಳಿಸಿದ್ದಾರೆ. ಇಬ್ಬರಿಗೂ ಗಾಯವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಶೇಖರ್ ಆಗೇರ್ ಬದುಕಲಿಲ್ಲ.