
ಯಲ್ಲಾಪುರ: `ಗುಡ್ಡಗಾಡಿನ ಜನರ ಆರ್ಥಿಕ ಅಭಿವೃದ್ಧಿಗಾಗಿ ಅರಣ್ಯ ಇಲಾಖೆ ನೌಕರರು ನರೆಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು\’ ಎಂದು ಯಲ್ಲಾಪುರ ಅರಣ್ಯ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಹೆಚ್ ಎ ಆನಂದ ಹೇಳಿದರು.
ಶನಿವಾರ ಅರಣ್ಯ ಸಭಾ ಭವನದಲ್ಲಿ `ನರೇಗಾ ಸಮರ್ಪಕ ಅನುಷ್ಠಾನ\’ ಕುರಿತ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು. `ಹಳ್ಳಿಗಾಡು ಜನರ ಜೀವನಮಟ್ಟ ಸುಧಾರಣೆಗೆ ನರೆಗಾ ಯೋಜನೆ ಪೂರಕವಾಗಿದೆ. ನೈಸರ್ಗಿಕವಾಗಿ ರಾಜ್ಯದಲ್ಲಿಯೇ ಅತ್ಯಧಿಕ ಅರಣ್ಯ ಹೊಂದಿರುವ ಈ ಪ್ರದೇಶದಲ್ಲಿ ನೀರು, ಮಣ್ಣು ಹಾಗೂ ಪರಿಸರ ಸಂರಕ್ಷಣೆಗೆ ಯೋಗ್ಯವಾದ ಕ್ರಿಯಾಯೋಜನೆ ರೂಪಿಸಿಕೊಳ್ಳಬೇಕು\’ ಎಂದರು.