
ಅಂಕೋಲಾ: ಕಾರವಾರದಿಂದ ಅಂಕೋಲಾ ಕಡೆ ಬೈಕ್ ಓಡಿಸಿಕೊಂಡು ಹೊರಟಿದ್ದ ಹಟ್ಟಿಕೇರಿಯ ವೀಕ್ಷಿತ ನಾಯ್ಕ (20) ಎಂಬಾತ ಬಾಬು ಗ್ಯಾರೇಜ್ ಬಳಿ ಗೇಣು ನಾಯ್ಕ (73) ಎಂಬಾತನಿಗೆ ಗುದ್ದಿದ್ದಾನೆ.
ಮಾವಿನಕೇರಿಯ ವೀಕ್ಷಿತ ನಾಯ್ಕ ಸದಾ ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದು, ನಿರ್ಲಕ್ಷತನದಿಂದ ಬೈಕ್ ಓಡಿಸಿದ ಆತ ವೃದ್ಧನಿಗೆ ಗುದ್ದಿ ತಾನು ನೆಲಕ್ಕೆ ಬಿದ್ದಿದ್ದಾನೆ. ಈ ವೇಳೆ ವೀಕ್ಷಿತ ನಾಯ್ಕ ಜೊತೆ ಬೈಕಿನಲ್ಲಿದ್ದ ಅವರ್ಸಾದ ಸಂದೇಶ ಮೇತ್ರಿ\’ಗೆ ಸಹ ಗಾಯವಾಗಿದೆ.