
ದಾಂಡೇಲಿಯ ಪೆಪರ್\’ಮಿಲ್ನವರು ಕೊಡುಗೆಯಾಗಿ ನೀಡಿದ್ದ `ತೇಲುವ ಕಾರಂಜಿ\’ ಗೋಕರ್ಣದ ಕೋಟಿತೀರ್ಥದ ನೀರಿನಲ್ಲಿ ಮುಳುಗಿದೆ.
ನೀರಿನ ಒಳಗೆ ಛಾಯಾಚಿತ್ರ ತೆಗೆಯುವ ಗಣಪತಿ ಉಪಾಧ್ಯ ಇದನ್ನು ಪತ್ತೆ ಮಾಡಿ, ಆ ವಿಡಿಯೋ ಹರಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ `ತೇಲುವ ಕಾರಂಜಿ ಮುಳುಗಿದ\’ ಬಗ್ಗೆ ಚರ್ಚೆಯಾಗುತ್ತಿದೆ. ಕೋಟಿತೀರ್ಥದ ನೀರಿನ ಶುದ್ಧತೆಗಾಗಿ ಈ ಕಾರಂಜಿ ಅಳವಡಿಸುವ ಚಿಂತನೆ ಇತ್ತು. ಪ್ರಾಯೋಗಿಕ ಪರೀಕ್ಷೆ ಸಹ ನಡೆದಿತ್ತು. ಮಳೆಯ ಬಾರಕ್ಕೆ ಆ ಕಾರಂಜಿ ನೀರಿನ ತಳ ಸೇರಿದೆ.