
ಸಿದ್ದಾಪುರ: ದಟ್ಟವಾದ ಕಾಡು, ಧಾರಾಕಾರ ಮಳೆ, ಸೊಳ್ಳೆಗಳ ಕಾಟವನ್ನು ಲೆಕ್ಕಿಸದೇ ಸಣ್ಣದೊಂದು ತಾಡಪತ್ರೆ ಹಾಸಿಕೊಂಡು ಅತ್ಯಂತ ಆಸಕ್ತಿಯಿಂದ ಆರು ಜನ ಇಸ್ಪಿಟ್ ಆಡುತ್ತಿದ್ದರು. ಅವರ ಮೇಲೆ ಏಕಾಏಕಿ ಮುಗಿಬಿದ್ದ ಪಿಸೈ ಅನೀಲ ಬಿ ಎಂ ಎಲ್ಲರನ್ನು ವಶಕ್ಕೆ ಪಡೆದು ಕಂಬಿ ಹಿಂದೆ ಕೂರಿಸಿದರು.
ಜೂ 30ರ ಸಂಜೆ ಅವರಕೊಪ್ಪದ ಚಾಲಕ ನಯಾಬ್ ಸಾಬ್ ಕೂಲಿ ಕೆಲಸ ಮಾಡುವ ತನ್ನ ಸ್ನೇಹಿತರಾದ ಮಂಡ್ಲಿಕೊಪ್ಪದ ಲಕ್ಷ್ಮಣ ಪವಾರ್ ಹಾಗೂ ನೀಡಗೋಡದ ಮಂಜಾ ನಾಯ್ಕ\’ರನ್ನು ಇಸ್ಪಿಟ್ ಆಟಕ್ಕೆ ಕರೆದಿದ್ದ. ಆಗ ಅವರು ಕೃಷಿ ಮಾಡುತ್ತಿದ್ದ ಗುಂಜಗೋಡದ ನಾಗರಾಜ ನಾಯ್ಕ, ಅವರಗೊಪ್ಪ ಬಳಿ ಪೆಂಟಿಂಗ್ ಕೆಲಸ ಮಾಡುವ ಶಿವಾನಂದ ಚನ್ನಯ್ಯ ಹಾಗೂ ತಬ್ರೇಜ್ ಸತ್ತಾರ್\’ನನ್ನು ಕರೆದುಕೊಂಡು ಬಂದಿದ್ದರು. ಇವರೆಲ್ಲರೂ ಸೇರಿ 16ನೇ ಮೈಲುಗಲ್ಲಿನ ಬಳಿ ಇರುವ ಕಾಡು ಸೇರಿ ಪ್ಲಾಸ್ಟಿಕ್ ಚೀಲ ಹಾಸಿ ಕೂತಿದ್ದರು. ಅದರ ಮೇಲೆ ಇಸ್ಪಿಟ್ ಎಲೆಗಳನ್ನು ಹರಡಿ ಹಣ ಕಟ್ಟಿದ್ದರು. ಒಬ್ಬರಾದ ಮೇಲೆ ಒಬ್ಬರಂತೆ ಬೀಡಿ ಸೇದುತ್ತ ತಮ್ಮದೇ ಲೋಕದಲ್ಲಿ ಅವರು ವಿಹರಿಸುತ್ತಿದ್ದರು.
\’ತಾನೇ ಗೆಲ್ಲಬೇಕು\’ ಎಂದು ಜೂಜಾಟ ಶುರು ಮಾಡಿದ್ದ ಅವರ ಮೇಲೆ ಪೊಲೀಸರು ದಾಳಿ ನಡೆಸಿದರು. ನಂತರ 4200ರೂ ಹಣ, 52 ಇಸ್ಪಿಟ್ ಎಲೆಗಳ ಜೊತೆ ಆರೂ ಜನರನ್ನು ಪೊಲೀಸರು ಠಾಣೆಗೆ ಕರೆದೊಯ್ದು ಜೈಲಿನ ಊಟ ಹಾಕಿಸಿದರು.