
ಕಾರವಾರ: ಮಾವಿನಹೊಳೆ ಸೇತುವೆ ಬಳಿ ಮೀನು ಹಿಡಿಯಲು ಹೋದವರಿಗೆ ಶವವೊಂದು ಕಾಣಿಸಿದೆ.
ಜೂ 30ರ ಸಂಜೆ ಮಾವಿನಹೊಳೆ ಸುತ್ತಲಿನ ಕೆಲವರು ಹಳೆಭಾಗದ ಹಳ್ಳಕ್ಕೆ ಮೀನು ಹಿಡಿಯಲು ತೆರಳಿದ್ದರು. ಕಾಂಡ್ಲಾವನದ ಬಳಿ ಬಟ್ಟೆಯೊಂದು ತೇಲುತ್ತಿರುವುದನ್ನು ಕಂಡ ಜನ ಹತ್ತಿರ ಹೋಗಿ ನೋಡಿದಾಗ ವ್ಯಕ್ತಿಯ ಶವವೊಂದು ಕಾಂಡ್ಲಾ ಗಿಡಗಳಿಗೆ ಸಿಲುಕಿಕೊಂಡಿತ್ತು. ತಲೆಕೆಳಗಾಗಿ ಬಿದ್ದಿದ್ದ ಶವದ ಫೋಟೋ ತೆಗೆದ ಸ್ಥಳೀಯರು ಅದನ್ನು ಮೌಸೀನ ಖಾನ್ ಎಂಬಾತರಿಗೆ ಕಳುಹಿಸಿದ್ದು, ಪೊಲೀಸರು ಆಗಮಿಸಿ ಪರಿಶೀಲಿಸಿದರು. ಶವ ಕೊಳೆತ ಸ್ಥಿತಿಯಲ್ಲಿದ್ದು, ಗಬ್ಬು ವಾಸನೆ ಬರುತ್ತಿತ್ತು. ಅದಾಗಿಯೂ, ನೀರಿಗೆ ಇಳಿದ ಪೊಲೀಸರು ಸಾಹಸದಿಂದ ಅದನ್ನು ಮೇಲೆತ್ತಿದರು. ನಂತರ ಮೌಸೀನ ಖಾನ್ ಸಹ ಶವದ ಪೋಟೋವನ್ನು ಹಲವರಿಗೆ ಕಳುಹಿಸಿದ್ದರು. ಆದರೆ, ಸಾವನಪ್ಪಿದ ವ್ಯಕ್ತಿಯ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಅಂದಾಜು 45 ವರ್ಷದ ಪುರುಷನ ಶವ ಅದಾಗಿದ್ದು, ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನಪ್ಪಿರುವ ಶಂಕೆ ವ್ಯಕ್ತವಾಗಿದೆ.