ಸಿದ್ದಾಪುರ: ಪಟ್ಟಣ ಪಂಚಾಯತ ನೌಕರರ ವಿರುದ್ಧ ಸಾರ್ವಜನಿಕರಿಂದ ಆರೋಪಗಳ ಸುರಿಮಳೆಯಾಗಿದೆ. ಇಲ್ಲಿ ಎಜೆಂಟರ ಮೂಲಕ ಬಂದರೆ ಮಾತ್ರ ಸರ್ಕಾರಿ ಕೆಲಸ ನಡೆಯುತ್ತದೆ ಎಂಬುದು ಬಹುಮುಖ್ಯ ಆರೋಪ.
ತಹಶೀಲ್ದಾರ ಮಧುಸೂಧನ ಕುಲಕರ್ಣಿ ಅಧ್ಯಕ್ಷತೆಯಲ್ಲಿ ನಡೆದ ಪಟ್ಟಣ ಪಂಚಾಯತ ಸಭೆಯಲ್ಲಿಯೇ ಈ ಬಗ್ಗೆ ಕೆ.ಜಿ.ನಾಯ್ಕ ಹಣಿಜೀಬೈಲ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ 4500ಕ್ಕೂ ಅಧಿಕ ಖಾಸಗಿ ಆಸ್ತಿಯಿದ್ದು, ದಾಖಲೆಗಳಲ್ಲಿ 1300 ಆಸ್ತಿ ಮಾತ್ರ ನೋಂದಣಿಯಾಗಿದೆ. ಉಳಿದ ಆಸ್ತಿಯ ಆದಾಯ ಎಲ್ಲಿ ಹೋಗುತ್ತದೆ? ಎಂಬುದು ಅವರ ಪ್ರಶ್ನೆ. `ಆಸ್ತಿ ನೋಂದಣಿ ಸರಳವಾಗಬೇಕು\’ ಎಂದವರು ಒತ್ತಾಯಿಸಿದರು. ಬೀದಿ ದೀಪಗಳ ಅಳವಡಿಕೆ ಹಾಗೂ ನಿರ್ವಹಣೆ ಬಗ್ಗೆ ಸಹ ಪ ಪಂ ಸದಸ್ಯರು ಅಸಮಧಾನ ವ್ಯಕ್ತಪಡಿಸಿದರು.