ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಅಣೆಕಟ್ಟುಗಳಲ್ಲಿನ ಒಳ ಹರಿವು ಹೆಚ್ಚಾಗಿದೆ. ಇದರ ಜೊತೆ ಜಿಲ್ಲೆಯ ನದಿಗಳ ನೀರಿನಮಟ್ಟ ಏರಿಕೆಯಾಗಿದೆ.
ಯಲ್ಲಾಪುರ ತಾಲೂಕಿನ ಗುಳ್ಳಾಪುರ ಬಳಿಯಿರುವ ಫಣಸಗುಳಿ ಸೇತುವೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ. ಹೀಗಾಗಿ ಈ ಭಾಗದಲ್ಲಿ ಸಂಚಾರ ಅಸಾಧ್ಯ. ಪ್ರಸಿದ್ಧ ಸಾತೊಡ್ಡಿ ಜಲಪಾತಕ್ಕೆ ತೆರಳುವ ಮಾರ್ಗವನ್ನು ಸಹ ಬಂದ್ ಮಾಡಲಾಗಿದೆ.

ಜೊತೆಗೆ ಜಲಪಾತ ವೀಕ್ಷಣೆಗೆ ಆಗಮಿಸದಂತೆ ಪ್ರವಾಸಿಗರಿಗೆ ಮುನ್ನಚ್ಚರಿಕೆ ನೀಡಲಾಗಿದೆ. ಶಿರಲೆ ಜಲಪಾತದ ಬಳಿ ಪೊಲೀಸರು ಪ್ರವೇಶ ನಿಷೇಧದ ಸೂಚನಾ ಫಲಕ ಅಳವಡಿಸಿದ್ದಾರೆ. ಜಿಲ್ಲೆಯ ಹಲವು ಕಡೆ ಗ್ರಾಮೀಣ ಭಾಗಗಳಲ್ಲಿ ಅಲ್ಪ ಪ್ರಮಾಣದ ಗುಡ್ಡ ಕುಸಿತ ಉಂಟಾಗಿದೆ. ರಸ್ತೆಯ ಮೇಲೆ ನೀರು ನಿಂತಿರುವುದು, ಶುದ್ಧ ನೀರಿನ ಜೊತೆ ಗಟಾರದ ನೀರು ಮಿಶ್ರಣ ಸಾಮಾನ್ಯವಾಗಿದೆ.