
ಕುಮಟಾ: ಮಣಕಿ ಕ್ರಿಸ್ಟಲ್ ಬಾರ್ ಬಳಿ ಜೂ 2ರಂದು ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಹುಬ್ಬಳ್ಳಿಯ ಸಿದ್ದಲಿಂಗಪ್ಪ ಸಕ್ರಿಕಡ್ಡಿ (32) ಎಂಬಾತ ಜೂ 3ರಂದು ಸಾವನಪ್ಪಿದ್ದಾನೆ.
ಕುಮಟಾದಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಈತ ಜೂ 2ರ ಬೆಳಗ್ಗೆ ಹೆದ್ದಾರಿ ಅಂಚಿನ ಬೋರ್ಡಿಗೆ ಬೈಕ್ ಗುದ್ದಿ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಆತನನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾಕಷ್ಟು ಪ್ರಯತ್ನ ಪಟ್ಟರೂ ಆತನನ್ನು ಬದುಕಿಸಿಕೊಳ್ಳಲು ಆಗಲಿಲ್ಲ.