ಯಲ್ಲಾಪುರ: ತಾಲೂಕು ಮಟ್ಟದ ಜನಸ್ಪಂದನಾ ಸಭೆಯಲ್ಲಿ ಪಟ್ಟಣ ಪಂಚಾಯತ ಜನಪ್ರತಿನಿಧಿಗಳಿಗೆ ಆಹ್ವಾನವೇ ಇರಲಿಲ್ಲ. ಈ ಬಗ್ಗೆ ಪಟ್ಟಣ ಪಂಚಾಯತ ಸದಸ್ಯ ಸೋಮು ನಾಯ್ಕ ಆಕ್ರೋಶ ಹೊರಹಾಕಿದ್ದಾರೆ.
`ಪಟ್ಟಣ ವ್ಯಾಪ್ತಿಯಲ್ಲಿರುವ ಅನೇಕ ಸಮಸ್ಯೆಗಳ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ಮಾತನಾಡುತ್ತಿದ್ದರು. ರವೀಂದ್ರನಗರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಈ ಬಗ್ಗೆ ಜನಸ್ಪಂದನಾ ಸಭೆಯಲ್ಲಿ ಚರ್ಚಿಸಬೇಕಿತ್ತು. ಶಾಸಕರು ಹಾಗೂ ಅಧಿಕಾರಿಗಳು ಪಟ್ಟಣ ಪಂಚಾಯತ ಸದಸ್ಯರನ್ನು ವಿಶ್ವಾಸಕ್ಕೆ ಪಡೆದಿಲ್ಲ\’ ಎಂದವರು ದೂರಿದರು.
ಪಟ್ಟಣವನ್ನು ಡೆಂಗ್ಯು ಸಮಸ್ಯೆ ಕಾಡುತ್ತಿದೆ. ಹೆಬ್ಬಾರ್ ನಗರದಲ್ಲಿ ಬಡವರಿಗೆ ಮನೆ ನಿರ್ಮಾಣ ವಿಷಯದಲ್ಲಿ ಅನ್ಯಾಯವಾಗಿದೆ. ಮನೆ ಸಿಗುವ ಕನಸಿನಿಂದ ಹಣ ಪಾವತಿಸಿದವರಿಗೆ ಈವರೆಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈ ಹಿಂದೆ ರವೀಂದ್ರ ನಗರದಲ್ಲಿ ಸಹ ಮನೆ ನಿರ್ಮಾಣ ವಿಷಯವಾಗಿ ಗುದ್ದಲಿ ಪೂಜೆ ನಡೆದಿತ್ತು. ನಂತರ ಅದು ನೆನೆಗುದಿಗೆ ಬಿದ್ದಿದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ನಮಗೆ ಅವಕಾಶ ಇರಲಿಲ್ಲ\’ ಎಂದವರು ಹೇಳಿದ್ದಾರೆ.