ಸರ್ಕಾರದ ಆದಾಯ ವೃದ್ದಿಸಿದ ಮಹಿಳೆಯರು!
ಉತ್ತರ ಕನ್ನಡ ಜಿಲ್ಲೆಯ ಮಹಿಳೆಯರು ಗೃಹಲಕ್ಷೀ, ಗೃಹಜ್ಯೋತಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಸರ್ಕಾರದ ಆದಾಯ ವೃದ್ದಿಗೆ ಸಹಕರಿಸುವ ಕಾರ್ಯಕ್ಕೆ ಕೈ ಹಚ್ಚಿದ್ದಾರೆ.
ಸ್ಥಳೀಯ ಸಂಸ್ಥೆಗಳಲ್ಲಿ ಬಾಕಿ ಇರುವ ವಿವಿಧ ತೆರಿಗಳ ಹೊಣೆ ಇದೀಗ ಮಹಿಳೆಯರ ಮೇಲಿದೆ. ಸ್ವ ಸಹಾಯ ಸಂಘದಲ್ಲಿನ ಮಹಿಳೆಯರು ಮನೆ ಮನೆಗೆ ತೆರಳಿ ಹಣ ಸಂಗ್ರಹಿಸಿ ಖಜಾನೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ.
ಸ್ಥಳೀಯ ಸಂಸ್ಥೆಗಳಲ್ಲಿನ ನೀರಿನ ಬಳಕೆ ಶುಲ್ಕದ ಹಿಂದಿನ ಬಾಕಿ ಮೊತ್ತ ಬಡ್ಡಿಸಹಿತ ವಸೂಲಿ ಮಾಡುವುದರಲ್ಲಿ ಸ್ವ ಸಹಾಯ ಸಂಘದ ಸದಸ್ಯರು ಮುಂದಿದ್ದು, ಅವರಿಗೆ ಆಸ್ತಿ ತೆರಿಗೆ ವಸೂಲಿಯ ಹೊಣೆಯನ್ನು ಸಹ ಸರ್ಕಾರವಹಿಸಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಮಹಿಳಾ ಪ್ರತಿನಿಧಿಸುವ ಸ್ವ- ಸಹಾಯ ಗುಂಪುಗಳ ಸೇವೆಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡಿರುವ ಸರ್ಕಾರ ತೆರಿಗೆ ಸಂಗ್ರಹಕ್ಕಾಗಿ ದಿನವಿಡೀ ದುಡಿಯುವ ಅವರಿಗೂ ಪ್ರೋತ್ಸಾಹ ಧನ ನೀಡಲು ಆದೇಶ ಹೊರಡಿಸಿದೆ. ವಸೂಲಾತಿ ಮಾಡುವ ಮೊತ್ತದ ಶೇ 5ರಷ್ಟು ಸ್ವ ಸಹಾಯ ಗುಂಪುಗಳಿಗೆ ಸಿಗಲಿದೆ. ಪ್ರತಿ ತಿಂಗಳು ಕೈಗೊಂಡ ಪ್ರಗತಿಯ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವ ಜವಾಬ್ದಾರಿಯನ್ನು ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರಿಗೆ ವಹಿಸಲಾಗಿದೆ.