ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಯಲ್ಲಾಪುರ ಸಮಿತಿ ಪ್ರತಿ ತಿಂಗಳು ನಡೆಸುವ ಕಾರ್ಯಕ್ರಮ ಈ ಸಲ ಜುಲೈ 6ರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
`ನನ್ನ ಕವನ ಮತ್ತು ಉಪನ್ಯಾಸ\’ ಕಾರ್ಯಕ್ರಮವನ್ನು ಸಂಕಲ್ಪದ ಮೌನ ಗ್ರಂಥಾಲಯದಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆವಹಿಸಲಿದ್ದಾರೆ. ಪೌರಾಣಿಕ ಸಾಹಿತ್ಯದಲ್ಲಿ ಯಕ್ಷಗಾನ ಪರಂಪರೆ ಈ ವಿಷಯದ ಬಗ್ಗೆ ನಿವೃತ್ತ ಉಪನ್ಯಾಸಕ ಡಾ ಗಣಪತಿ ಭಟ್ಟ ಕಟೀಲು ಉಪನ್ಯಾಸದ ನೀಡಲಿದ್ದಾರೆ. ಮುಖ್ಯ ಯಕ್ಷಗಾನದ ಖ್ಯಾತ ಭಾಗವತರಾದ ಅನಂತ ಹೆಗಡೆ ದಂತಳಿಗೆ ಅತಿಥಿಗಳಾಗಿದ್ದಾರೆ. ನಂತರ ಕವಿಗಳಿಂದ ಮುಂಗಾರು ಕುರಿತು ಕವನ ವಾಚನ ನಡೆಯಲಿದೆ. ಸಾಹಿತ್ಯಾಸಕ್ತರೆಲ್ಲರೂ ಇಲ್ಲಿ ಸೇರೋಣ. ನೀವು ಬನ್ನಿ!