ಕಾರವಾರ: ಗೌಂಡಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಬಿಣಗಾದ ಬಂದಗಿಸಾಬ್ ಚಿಂತೆಗುoಟಿ ಎಂಬಾತನಿಗೆ ಪಂಚತಾರಾ ಹೋಟೆಲ್ ಬಳಿ ಅಪಘಾತವಾಗಿದೆ.
ಜೂ 2ರಂದು ಈತ ಹೈಚರ್ಚ ರಸ್ತೆಯ ಬಾರ್ ಮುಂದೆ ನಿಂತಿದ್ದ. ಆಗ ಮೂಲತಃ ನಂದನಗದ್ದಾದ ಪ್ರಸ್ತುತ ಗೋವಾದ ಮಡಗಾವ್\’ದಲ್ಲಿ ಉದ್ಯೋಗದಲ್ಲಿರುವ ಸುರೇಶ್ ನಾಯ್ಕ ಹಿಂದಿನಿoದ ಕಾರು ಚಲಾಯಿಸಿಕೊಂಡು ಬಂದು ಗುದ್ದಿದ್ದಾನೆ. ಇದರಿಂದ ಬಂದಗಿಸಾಬ್\’ನ ಎಡಗಾಲಿನ ಪಾದದ ಮೂಳೆ ಮುರಿದಿದೆ.