ಅಂಕೋಲಾ: ವಾಸರ ಕುದ್ರುಗಿ ಉಳುಗದ್ದೆಯ ಗಂಗೆ ಸುಕ್ರು ಗೌಡ (55) ಎಂಬಾತರು ಗದ್ದೆ ಕೆಲಸಕ್ಕೆ ಹೋಗಿದ್ದಾಗ ಕಾಲು ಜಾರಿ ನೀರಿನಲ್ಲಿ ಬಿದ್ದು ಸಾವನಪ್ಪಿದ್ದಾರೆ.
ಜೂ 30ರಂದು ತಮ್ಮ ಮನೆ ಮುಂದಿನ ಗದ್ದೆ ಕೆಲಸಕ್ಕೆ ಹೋಗಿದ್ದ ಅವರು ಅಲ್ಲಿ ಗೊಬ್ಬರ ಹರಡಿದ್ದರು. ನಂತರ ಅಲ್ಲಿಯೇ ಇದ್ದ ಹಳ್ಳದಲ್ಲಿ ಕೈ ಕಾಲು ತೊಳೆಯುತ್ತಿರುವಾಗ ನೀರಿನಲ್ಲಿ ಕೊಚ್ಚಿ ಹೋಗಿ ತಲೆಕೆಳಗಾಗಿ ಬಿದ್ದಿದ್ದರು. ಇದನ್ನು ನೋಡಿದ ಅವರ ಮಗ ಗಣಪತಿ ಗೌಡ ತಕ್ಷಣ ಅಂಕೋಲಾ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಜೂ 3ರಂದು ಅವರು ಸಾವನಪ್ಪಿದರು.