ಭಟ್ಕಳ: ತಾಲೂಕಾ ಕಾನೂನು ಸೇವಾ ಸಮಿತಿ ಅಡಿಯಲ್ಲಿ ನಡೆಯುವ ಕಚೇರಿಯಲ್ಲಿ ಎರಡು ಹುದ್ದೆ ಖಾಲಿ ಇದ್ದು, ಅರ್ಹರ ಹುಡುಕಾಟ ನಡೆದಿದೆ.
ಇಲ್ಲಿ ಕ್ಲರ್ಕ ಕೆಲಸಕ್ಕೆ ಜನ ಬೇಕಾಗಿದ್ದು, ಅವರಿಗೆ ಟೈಪಿಂಗ್ ಸಹ ಗೊತ್ತಿರಬೇಕು. ಜೊತೆಗೆ ದಲಾಯಿತ ಹುದ್ದೆಗೂ ಯೋಗ್ಯರ ಹುಡುಕಾಟ ನಡೆದಿದೆ. ಕ್ಲರ್ಕ ಹುದ್ದೆಗೆ ಪಿಯುಸಿ ಪಾಸಾಗಿರಬೇಕು. ದಲಾಯಿತ ಹುದ್ದೆಗೆ ಎಸ್ ಎಸ್ ಎಲ್ ಸಿ ಮುಗಿಸಿದ್ದರೂ ಸಾಕು. ಈ ಎರಡು ಹುದ್ದೆಗಳು ತಾತ್ಕಾಲಿಕ. ಅರ್ಹರು ಜುಲೈ 25ರ ಒಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದವರು ಜುಲೈ 27ರಂದು ಬೆಳಗ್ಗೆ 10 ಗಂಟೆಗೆ ನ್ಯಾಯಾಧೀಶರ ಕಚೇರಿಗೆ ಆಗಮಿಸಿ ಸಂದರ್ಶನ ಎದುರಿಸಬಹುದು.
ಅರ್ಜಿ ಸಲ್ಲಿಸುವ ವಿಳಾಸ:
ಕಾರ್ಯದರ್ಶಿಗಳು
ತಾಲೂಕು ಕಾನೂನು ಸೇವಾ ಸಮಿತಿ
ಮತ್ತು ಪ್ರಧಾನ ಸಿವಿಲ್ ಜಡ್ಜ್
ಹಾಗೂ ಜೆ.ಎಂ.ಸಿ ನ್ಯಾಯಾಲಯ ಸಂಕೀರ್ಣ
ಭಟ್ಕಳ – 581320