ಶಿರಸಿ: ಟ್ಯೂಶನ್\’ಗೆ ಹೋಗುತ್ತಿದ್ದ ಬಾಲಕಿಗೆ ಅಪರಿಚಿತ ಕಾರು ಗುದ್ದಿದ್ದು, ಕಾರು ಚಾಲಕ ಪರಾರಿಯಾಗಿದ್ದಾನೆ.
ಮಹಾಸತಿ ದೇವಸ್ಥಾನದ ಬಳಿ ಟೇಲರ್ ವೃತ್ತಿ ಮಾಡುತ್ತಿರುವ ಲಲಿತಾ ಮೇರವಾಡಿ (44) ಎಂಬಾತರು ಜೂ 3ರಂದು ತಮ್ಮ ಮಗಳನ್ನು ಸ್ಕೂಟಿಯಲ್ಲಿ ಕೂರಿಸಿಕೊಂಡು ಯಲ್ಲಾಪುರ ನಾಕಾ ಬಳಿಯಿರುವ ಟ್ಯೂಶನ್\’ಗೆ ಹೊರಟಿದ್ದರು. ಆಗ ಯಲ್ಲಾಪುರ ಕಡೆಯಿಂದ ಬಂದ ಅಪರಿಚಿತ ಆಶಾ ಪ್ರಭು ಆಸ್ಪತ್ರೆ ಬಳಿ ತನ್ನ ಕಾರನ್ನು ಸ್ಕೂಟಿಗೆ ಗುದ್ದಿದ್ದು, ಸ್ಕೂಟಿಯಲ್ಲಿ ಹಿಂದೆ ಕೂತಿದ್ದ ಬಾಲಕಿಗೆ ಗಾಯವಾಗಿದೆ. ಜೊತೆಗೆ ಲಲಿತಾ ಅವರಿಗೂ ಪೆಟ್ಟಾಗಿದೆ. ಅಪಘಾತದಿಂದ ಬೆದರಿದ ಕಾರು ಚಾಲಕ ಗಾಯಗೊಂಡವರನ್ನು ಆಸ್ಪತ್ರೆಗೂ ಸೇರಿಸಿಲ್ಲ. ಪೊಲೀಸ್ ಠಾಣೆಗೂ ಮಾಹಿತಿ ನೀಡಿಲ್ಲ. ಆತ ತಕ್ಷಣ ಅಲ್ಲಿಂದ ಪರಾರಿಯಾಗಿದ್ದು, ನೊಂದವರು ಇದೀಗ ಪೊಲೀಸ್ ದೂರು ನೀಡಿದ್ದಾರೆ.